ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದಲ್ಲಿ ಆಟೋ ದರ ಏರಿಕೆ ಮಾಡಲು ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಅಧಿಕೃತ ಆದೇಶ ಹೊರ ಬೀಳುವುದು ಮಾತ್ರ ಬಾಕಿ ಇದೆ.
ಕಳೆದ 3-4 ವರ್ಷದಿಂದ ಆಟೋ ದರ ಏರಿಕೆಗೆ ಆಗ್ರಹಿಸಿ ಹೋರಾಟ ನಡೆಯುತ್ತಿದೆ. ಈ ಬಾರಿ ಸದ್ಯ ಆಟೋ ಚಾಲಕರ ಬೇಡಿಕೆ ಈಡೇರಿಸಲು ಜಿಲ್ಲಾಡಳಿತ ಮನಸ್ಸು ಮಾಡಿದ್ದು, ಏಪ್ರಿಲ್ 1ಕ್ಕೆ ಅಧಿಕೃತವಾಗಿ ಪರಿಷ್ಕೃತ ದರ ಪಟ್ಟಿ ಜಾರಿಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಮಿನಿಮಂ ಚಾರ್ಜ್ 30 ರೂಪಾಯಿ ಹಾಗೂ ನಂತರದ ಪ್ರತಿ ಕಿಲೋ ಮೀಟರ್ ಗೆ 15 ರೂಪಾಯಿ ದರ ಇದೆ. ಪರಿಷ್ಕೃತ ದರ ಪಟ್ಟಿ ಪ್ರಕಾರ ಮಿನಿಮಂ ಚಾರ್ಜ್ 40 ರೂಪಾಯಿ ಆಗಲಿದೆ. ನಂತರದ ಪ್ರತಿ ಕಿಲೋ ಮೀಟರ್ ದರ 20 ರೂಪಾಯಿಗೆ ಏರಿಕೆ ಆಗಲಿದೆ.