ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೊಚ್ಚಿ ನೆಡುಂಬಾಶ್ಶೇರಿ ವಿಮಾನ ನಿಲ್ದಾಣದಲ್ಲಿ ತೆರೆದಿಟ್ಟಿದ್ದ ತ್ಯಾಜ್ಯದ ಗುಂಡಿಗೆ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿದೆ.
ರಾಜಸ್ಥಾನ ಮೂಲದ ರಿಧಾನ್ ಜಾಜು ಮೃತಪಟ್ಟ ಮಗು. ಪೋಷಕರ ಜೊತೆ ವಿಮಾನದಿಂದ ಇಳಿದಿದ್ದ ಕುಟುಂಬ ಮಗುವಿನೊಂದಿಗೆ ವಿಮಾನ ನಿಲ್ದಾಣದ ದೇಶೀಯ ಟರ್ಮಿನಲ್ ಹೊರಗಿನ ಕೆಫೆಗೆ ಹೊಕಿತ್ತು. ಈ ವೇಳೆ ಕೆಫೆಯ ಹೊರಗಡೆ ಆಟವಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಸಾರ್ವಜನಿಕರಿಗೆ ಪ್ರವೇಶವಿಲ್ಲದ ಸ್ಥಳದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಸಿಯಾಲ್ ಪ್ರಕಟಣೆಯಲ್ಲಿ ತಿಳಿಸಿದೆ. ದೇಶೀಯ ಟರ್ಮಿನಲ್‌ನ ಹೊರಗಿರುವ ಅನ್ನ ಸಾರಾ ಕೆಫೆಯ ಹಿಂಭಾಗದಲ್ಲಿ ಸಾರ್ವಜನಿಕರಿಗೆ ಪ್ರವೇಶವಿಲ್ಲದ ಸ್ಥಳದಲ್ಲಿ ಈ ದುರ್ಘಟನೆ ನಡೆದಿದೆ. ವಿಮಾನನಿಲ್ದಾಣದ ಕೆಫೆಗೆ ಮಗುವಿನ ಪೋಷಕರು ಬಂದಿದ್ದಾಗ ಈ ಘಟನೆ ನಡೆದಿದೆ.
ಇಂದು ನೆಡುಂಬಸ್ಸೆರಿ ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ಕಸದ ಗುಂಡಿಗೆ ಬಿದ್ದು ಮೂರು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಮೃತನನ್ನು ರಿಧಾನ್ ಎಂದು ಗುರುತಿಸಲಾಗಿದೆ. ವಿಮಾನ ನಿಲ್ದಾಣದ ದೇಶೀಯ ಟರ್ಮಿನಲ್ ಹೊರಗಿನ ಕೆಫೆಯ ಹಿಂದೆ ಈ ಘಟನೆ ನಡೆದಿದೆ. ತನ್ನ ಅಣ್ಣನೊಂದಿಗೆ ಹೊರಗೆ ಆಟವಾಡುತ್ತಿದ್ದ ಮಗು ಕಸ ತುಂಬಿದ ಗುಂಡಿಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.