ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗಡಿಯಾರ ಸಮೀಪದ ಜೋಗಿಬೆಟ್ಟು ಎಂಬಲ್ಲಿ ದ್ವಿಚಕ್ರವಾಹನ ಹಾಗೂ ಲಾರಿ ನಡುವೆ ಅಪಘಾತ ನಡೆದು ಬೈಕ್ ನಲ್ಲಿದ್ದ ಇಬ್ಬರು ಗಾಯಗೊಂಡಿದ್ದು, ಬಾಲಕ ಮೃತಪಟ್ಟಿದ್ದಾನೆ.
ಬೆಳ್ತಂಗಡಿ ಗರ್ಡಾಡಿ ಮರಕ್ಕಿಣ ನಿವಾಸಿ ಶಾಝಿನ್ (೬) ಮೃತ ಬಾಲಕನಾಗಿದ್ದಾನೆ. ದ್ವಿಚಕ್ರವಾಹನದಲ್ಲಿ ಹಸನಬ್ಬ ಬ್ಯಾರಿ ಪತ್ನಿ ನಸೀಮಾ ಹಾಗೂ ಪುತ್ರ ಶಾಝಿನ್ ಜತೆಗೆ ಕಲ್ಲಡ್ಕ ದಿಂದ ಉಪ್ಪಿನಂಗಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ ಉಪ್ಪಿನಂಗಡಿ ಕಡೆಯಿಂದ ಕೃಷ್ಣ ಶೆಟ್ಟಿ ಚಲಾಯಿಸಿಕೊಂಡು ಬಂದ ಲಾರಿ ಡಿಕ್ಕಿಯಾಗಿದೆ.
ಮೂವರು ದ್ವಿಚಕ್ರ ವಾಹನ ಸಮೇತ ಬಿದ್ದು ದೇಹದ ಭಾಗಗಳಿಗೆ ಗಾಯಗೊಂಡಿದ್ದು, ಸಾರ್ವಜನಿಕರು ಉಪಚರಿಸಿ ಶಾಝಿನ್‌ನನ್ನು ಚಿಕಿತ್ಸೆ ಬಗ್ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಗಾಯಗೊಂಡ ಸಲೀಂ ಮತ್ತು ನಸೀಮಾ ಅವರನ್ನು ತುಂಬೆ ಆಸ್ಪತ್ರೆಗೆ ದಾಖಲಿಸಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.