ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಗಲಕೋಟೆಯಲ್ಲಿ ಮಹಿಳೆ ಮೇಲೆ ಆಸಿಡ್ ದಾಳಿ ನಡೆಸಲಾಗಿದ್ದು, ಮಹಿಳೆಯ ಎಡಗಣ್ಣು ಮತ್ತು ಮುಖದ ಮೇಲೆ ಸುಟ್ಟ ಗಾಯಗಳಾಗಿವೆ.
ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ಬಳಿಯಲ್ಲಿ ಮನೆಯ ಬಾಗಿಲು ತೆಗೆಯಲಿಲ್ಲ ಎಂಬ ಕಾರಣಕ್ಕಾಗಿ ಪ್ರಿಯಕರ ಮೌನೇಶ್ ಬಡಿಗೇರ ಎಂಬಾತ ಮಹಿಳೆಯ ಮೇಲೆ ಕಿಟಕಿಯಿಂದ ನೀರು ಮಿಶ್ರಿತ ಆಯಸಿಡ್ ದಾಳಿ ಎರಚಿದ್ದಾನೆ.
ಗಾಯಗೊಂಡ ಲಕ್ಷ್ಮಿ ಬಡಿಗೇರ ಅವರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆ ಗೆ ದಾಖಲಿಸಲಾಗಿದೆ.
ವಿಜಯಪುರ ಮೂಲದ ಲಕ್ಷ್ಮೀ ಹಾಗೂ ಮೌನೇಶ್ ಗೆ ಮದುವೆಯಾಗಿದ್ದರೂ ಪರಸ್ಪರ ಲಿವಿಂಗ್ ಟುಗೆದರ್ ರಿಲೇಷನ್ ಶಿಪ್ ನಲ್ಲಿ ಇದ್ದರು. ಒಂದೇ ಮನೆಯಲ್ಲಿ ವಾಸವಿದ್ರು.
ಹೀಗೆ ಇದ್ದಂತ ಮೌನೇಶ್ ಗೆ ಲಕ್ಷ್ಮೀ ಬಡಿಗೇರ ಮೇಲೆ ಸಂಶಯ ಇತ್ತಂತೆ. ಇದೇ ಕಾರಣಕ್ಕಾಗಿ ಆಗಾಗ ಜಗಳ ಕೂಡ ಆಗುತ್ತಿತ್ತಂತೆ. ಒಂದು ವಾರದಿಂದ ಮೌನೇಶ್ ಮನೆ ಬಿಟ್ಟು ಹೋಗಿದ್ದ . ಆದ್ರೇ ನಿನ್ನೆ ರಾತ್ರಿ ಮನೆಗೆ ವಾಪಾಸ್ಸು ಮೌನೇಶ್ ಬಂದಿದ್ದಾನೆ. ಈ ವೇಳೆ ಲಕ್ಷ್ಮೀ ಮನೆಯ ಬಾಗಿಲು ತೆಗೆಯೋದಕ್ಕೆ ನಿರಾಕರಿಸಿದ್ದಾರೆ.
ಇದರಿಂದ ಕುಪಿತಗೊಂಡ ಮೌನೇಶ್ ಅದೆಲ್ಲಿಂದಲೋ ಆಯಸಿಡ್ ಖರೀದಿಸಿ ತಂದು, ಅದಕ್ಕೆ ನೀರು ಮಿಶ್ರಣ ಮಾಡಿ ಲಕ್ಷ್ಮೀ ಹಾಗೂ ಅವರ 8 ವರ್ಷದ ಪುತ್ರಿಯ ಮೇಲೆ ಕಿಟಕಿಯಿಂದಲೇ ಎರಚಿದ್ದಾನೆ. ಇದರಿಂದ ಲಕ್ಷ್ಮೀ ಎಡಗಣ್ಣು, ಮುಖಕ್ಕೆ ಗಾಯವಾಗಿದೆ. ಪುತ್ರಿಗೆ ಕೂಡ ಅಲ್ಪಸ್ವಲ್ಪ ಗಾಯವಾಗಿದೆ.