ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು-ಕಾಶ್ಮೀರ(Jammu-Kashmir)ದ ಚೌಕಿ ಚೌರಾ ಟುಗಿ ಸಮೀಪ ಯಾತ್ರಿಕರಿದ್ದ ಬಸ್(Bus)ವೊಂದು ಬೆಟ್ಟದ ಮೇಲಿನಿಂದ ಉರುಳಿ ಬಿದ್ದಿದ್ದು, 15 ಜನ ಮೃತಪಟ್ಟಿದ್ದು, 40 ಜನರಿಗೆ ಗಂಭೀರ ಗಾಯಗಳಾಗಿವೆ.
ಕಲಿಧಾರ್ ಪ್ರದೇಶದಲ್ಲಿ ಬೆಟ್ಟ ಮೇಲೆ ಚಲಿಸುತ್ತಿದ್ದ ಬಸ್ ಏಕಾಏಕಿ ಸ್ಕಿಡ್ ಆಗಿ 150 ಅಡಿ ಎತ್ತರದಿಂದ ಕೆಳಗೆ ಉರುಳಿದೆ. ಈ ಬಸ್ ಕುರುಕ್ಷೇತ್ರದಿಂದ ಶಿವಖೋರಿಗೆ ಪ್ರಯಾಣಿಸುತ್ತಿತ್ತು.
ಇನ್ನು ಘಟನೆಯಲ್ಲಿ ಹತ್ತಾರು ಜನ ಗಂಭೀರವಾಗಿ ಗಾಯಗೊಂಡಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಅವರನ್ನು ಜಮ್ಮುವಿನ GMC ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಕೆಲವು ಗಾಯಾಳುಗಳನ್ನು ಚೌಕಿ ಚೌರ ಆಸ್ಪತ್ರೆ ಮತ್ತು ಅಖ್ನೂರ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.