ಹೊಸದಿಗಂತ ಡಿಜಿಟಲ್ ಡೆಸ್ಕ್:
10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ಅಚ್ಚರಿ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಯ ದೊಡ್ಡಪ್ಪನ ಮಗನೇ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಇದಲ್ಲದೆ, ಈ ಪ್ರಕರಣದ ಭಾಗವಾಗಿ ಆರೋಪಿ ಅಣ್ಣನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರಗಳು
ವಿದ್ಯಾರ್ಥಿನಿ ಕಲಬುರಗಿಯ ವಸತಿ ಶಾಲೆಯಲ್ಲಿ ಓದುತ್ತಿದ್ದಳು. ಶಾಲೆಗೆ ರಜೆ ಇರುವಾಗ ಮನೆಗೆ ಬರುತ್ತಿದ್ದಳು. ಹೀಗೆ ಬಂದಾಗ ಸಹೋದರ ಆಕೆಯನ್ನು ಬಳಸಿಕೊಳ್ಳುತ್ತಿದ್ದನು. ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಆತ ತಂಗಿ ಎನ್ನುವುದನ್ನೂ ನೋಡದೇ ರೇಪ್ ಮಾಡುತ್ತಿದ್ದ.
ಕಳೆದ ವರ್ಷ ಮಾರ್ಚ್‌ನಿಂದ ವಿದ್ಯಾರ್ಥಿನಿ ತನ್ನ ಅಣ್ಣನಿಂದ ಹಲವು ಬಾರಿ ಅತ್ಯಾಚಾರಕ್ಕೆ ಒಳಗಾಗಿದ್ದಳು. ಈ ಬಗ್ಗೆ ಮಾತನಾಡಿದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ. ಆದ್ದರಿಂದಲೇ ಆಕೆ ಅತ್ಯಾಚಾರ ಪ್ರಕರಣವನ್ನು ಗೌಪ್ಯವಾಗಿಟ್ಟಿದ್ದಳು.
ವಿದ್ಯಾರ್ಥಿನಿ ದಪ್ಪಗಿರುವ ಕಾರಣ ಆಕೆಯ ದೇಹದಲ್ಲಿನ ಬದಲಾವಣೆಗಳನ್ನು ಪತ್ತೆ ಹಚ್ಚಲು ಆಕೆಯ ಕುಟುಂಬದವರೂ ಮುಂದಾಗಿಲ್ಲ. ಆದರೆ ಡಿಸೆಂಬರ್ 24 ರಂದು ಶಾಲೆಯಲ್ಲಿದ್ದಾಗ ಆಕೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ.
ಹಾಗಾಗಿ ತನ್ನ ಸಂಬಂಧಿಕರ ಮನೆಗೆ ಹೋಗಿರುವುದಾಗಿ ಶಿಕ್ಷಕಿಗೆ ತಿಳಿಸಿದ್ದಾಳೆ. ಬಳಿಕ ಸಂಬಂಧಿಕರು ವಿದ್ಯಾರ್ಥಿಯ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ನಂತರ ಆಕೆಯನ್ನು ಚಿಕಿತ್ಸೆಗಾಗಿ ಮಹಾರಾಷ್ಟ್ರದ ಸೋಲಾಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದಾಗ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ತಿಳಿದ ಕುಟುಂಬಸ್ಥರೂ ಬೆಚ್ಚಿಬಿದ್ದಿದ್ದಾರೆ. ಆಕೆಗೆ ಮದುವೆಯಾಗಿಲ್ಲ, ಮಗುವಿಗೆ ಜನ್ಮ ಅಂದ್ರೆ ಹೇಗೆ ಅಂತಾ ಮಾತಾಡಿಕೊಳ್ಳಲು ಆರಂಭಿಸಿದರು. ನಂತರ ಆಸ್ಪತ್ರೆಯವರು ಮಹಾರಾಷ್ಟ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.