ಹೊಸದಿಗಂತ ಡಿಜಿಟಲ್ ಡೆಸ್ಕ್:
ಟರ್ಕಿಯಲ್ಲಿ ಇಂದು ಮತ್ತೊಂದು ಭೂಕಂಪ ಸಂಭವಿಸಿದೆ. ಈಗಾಗಲೇ 50,000 ಕ್ಕೂ ಹೆಚ್ಚು ಜನರನ್ನು ಕಳೆದುಕೊಂಡು ನಿಧಾನಗತಿಯಲ್ಲಿಚೇತರಿಕೆಯ ಹಂತದಲ್ಲಿದ್ದ ಟರ್ಕಿಗೆ ಮತ್ತೊಮ್ಮೆ ಭೂಕಂಪ ದೊಡ್ಡ ಪೆಟ್ಟು ನೀಡಿದೆ.
ಮತ್ತೆ 5.3 ರ ತೀವ್ರತೆಯೊಂದಿಗೆ ಮಧ್ಯ ಟರ್ಕಿಶ್ ಪ್ರಾಂತ್ಯದ ನಿಗ್ಡೆ ಬಳಿ ಭೂಕಂಪ ಸಂಭವಿಸಿದೆ ಎಂದು ಟರ್ಕಿಶ್ ವಿಪತ್ತು ಸಂಸ್ಥೆ ತಿಳಿಸಿದೆ.
ಸ್ಥಳಾಂತರಗೊಂಡ 1.5 ಮಿಲಿಯನ್ ಜನರಿಗೆ ಮನೆಗಳನ್ನು ಮರುನಿರ್ಮಾಣ ಮಾಡಲು ಟರ್ಕಿ ತನ್ನ ಕೆಲಸವನ್ನು ಪ್ರಾರಂಭಿಸಿದ ದಿನದಂದು ಭೂಕಂಪ ಸಂಭವಿಸಿದೆ.