Thursday, March 30, 2023

Latest Posts

SHOCKING | ಜಪಾನ್ ನಲ್ಲಿ ಭೂಕಂಪನ: 6.1 ತೀವ್ರತೆ ದಾಖಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಪಾನ್ ನ ಉತ್ತರದ ದ್ವೀಪವಾದ ಹೊಕ್ಕೈಡೊದಲ್ಲಿ ಶನಿವಾರ 6.1 ತೀವ್ರತೆಯ ಭೂಕಂಪ ಸಂಭವಿಸಿದೆ.
ಹವಾಮಾನ ಸಂಸ್ಥೆ ಮಾಹಿತಿಯಂತೆ ಭೂಕಂಪನ ತೀವ್ರತೆಯ ಮಾಪಕದಲ್ಲಿ 7 ಕ್ಕಿಂತ ಕಡಿಮೆ 5 ರಷ್ಟು ದಾಖಲಾಗಿದೆ ಎಂದು ತಿಳಿಸಿದೆ.

ಜಪಾನ್ ನ ನ್ಯಾಷನಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಅರ್ಥ್ ಸೈನ್ಸ್ ಅಂಡ್ ಡಿಸಾಸ್ಟರ್ ರೆಸಿಲಿಯನ್ಸ್ ಪ್ರಕಾರ, ಉತ್ತರ ದ್ವೀಪದ ನೆಮುರೊ ಪರ್ಯಾಯ ದ್ವೀಪದಲ್ಲಿ 61 ಕಿಲೋಮೀಟರ್ (38 ಮೈಲಿ) ಆಳದಲ್ಲಿ ಭೂಕಂಪ ಸಂಭವಿಸಿದೆ.

ರಾತ್ರಿ 10:27ಕ್ಕೆ ಹೊಕ್ಕೈಡೊದ ಪೂರ್ವ ಭಾಗವನ್ನು ನಡುಗಿಸಿದ ಭೂಕಂಪದ ನಂತರ ಯಾವುದೇ ಸುನಾಮಿ ಹೊರಡಿಸಲಾಗಿಲ್ಲ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!