ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ (New Delhi) ಬಾರಖಂಬಾ ರಸ್ತೆಯಲ್ಲಿರುವ ಕಟ್ಟಡದ 9 ನೇ ಮಹಡಿಯಲ್ಲಿ ಬೆಂಕಿ (Fire) ಕಾಣಿಸಿಕೊಂಡಿದೆ.
ಬೆಂಕಿಯನ್ನು ಹತೋಟಿಗೆ ತರಲು ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿವೆ.
ಹಲವು ಕಚೇರಿಗಳನ್ನು ಹೊಂದಿರುವ ದೆಹಲಿಯ ಪ್ರಮುಖ ಪ್ರದೇಶದ ಕಟ್ಟಡವಾಗಿದ್ದು, ಕನ್ನಾಟ್ ಪ್ಲೇಸ್‌ಗೆ ಸಮೀಪವಿರುವ ಬಾರಖಂಬಾ ರಸ್ತೆಯಲ್ಲಿರುವ ಡಿಸಿಎಂ ಕಟ್ಟಡದ ಒಂಬತ್ತನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಅಧಿಕಾರಿಗಳ ಪ್ರಕಾರ, ಸಂಜೆ 6.20 ಕ್ಕೆ ಬೆಂಕಿಯ ಬಗ್ಗೆ ಅವರಿಗೆ ಮಾಹಿತಿ ಸಿಕ್ಕಿತು. ನಂತರ ಸುಮಾರು 10 ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ಧಾವಿಸಿದೆ .