ಹೊಸದಿಗಂತ ವರದಿ, ಮಂಗಳೂರು:
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ವಿಭಾಗದ ಮಲವಂತಿಗೆ ಗ್ರಾಮದ ಬಂಗಾರಪಲಿಕೆ ಪರಿಸರದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ.
ಇಲ್ಲಿನ ಕಲ್ಲು ಮತ್ತು ತಡೆಗೋಡೆ ಪ್ರದೇಶದ ಹುಲ್ಲುಗಾವಲಿಗೆ ಬೆಂಕಿ ಹತ್ತಿಕೊಂಡು ಉರಿಯುತ್ತಿದೆ.ಅತ್ಯಂತ ದುರ್ಗಮ ಪ್ರದೇಶವಾದ ಇಲ್ಲಿ ಬೆಂಕಿ ಹತೋಟಿಗೆ ತರುವುದು ಸವಾಲಾಗಿದೆ. ಬೆಂಕಿಯ ಕೆನ್ನಾಲಿಗೆ ಹಲವು ಕಿಮೀ ದೂರದವರೆಗೂ ಕಂಡು ಬರುತ್ತಿದೆ.
ಬೆಳ್ತಂಗಡಿ ವನ್ಯಜೀವಿ ವಿಭಾಗದ ಆರ್ ಎಫ್ ಒ ಶರ್ಮಿಷ್ಠಾ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು,ಬೆಂಕಿಯು ಹುಲ್ಲುಗಾವಲು ಪ್ರದೇಶದಲ್ಲಿ ಹರಡಿದ್ದು ಹೆಚ್ಚಿನ ಹಾನಿಯಾಗುವ ಸಂಭವವಿಲ್ಲ ಎಂದು ತಿಳಿಸಿದ್ದಾರೆ.
ಇಲ್ಲಿ ಬೆಂಕಿ ಉಂಟಾಗುತ್ತಿದ್ದಂತೆ ಸಮೀಪದ ಗ್ರಾಮಗಳಲ್ಲಿ ವಾತಾವರಣ ಬದಲಾಗಿದ್ದು ಹಗಲಲ್ಲಿ ಉರಿಬಿಸಿಲು ರಾತ್ರಿಯಾಗುತ್ತಿದ್ದಂತೆ ಕೊಂಚ ತಂಪಿನ ವಾತಾವರಣ ಏರ್ಪಟ್ಟಿದೆ