SHOCKING | ಚಾರ್ಮಾಡಿ ಘಾಟಿಯಲ್ಲಿ ಭಾರೀ ಕಾಡ್ಗಿಚ್ಚು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಘಟ್ಟಗಳ ಸಾಲಿನ ಸೂಕ್ಷ್ಮ ಪ್ರದೇಶದಲ್ಲಿ ಭಾರೀ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಬಿದಿರುತಳ ಪ್ರದೇಶದಲ್ಲಿ ಕಾಡ್ಗಿಚ್ಚು ಹೊತ್ತಿಕೊಂಡಿದ್ದು, ನೂರಾರು ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿದೆ.

ಮಾನವನ ಕುಕೃತ್ಯವೋ, ಪ್ರಾಕೃತಿಕ ಕಾರಣದಿಂದ ಬೆಂಕಿ ಉಂಟಾಗಿದೆಯೋ ಎಂಬುದು ಗೊತ್ತಾಗಬೇಕಾಗಿದೆ.

ಪ್ರಾಣಿ ಸೇರಿದಂತೆ ಅಪರೂಪದ ಸಸ್ಯ ಸಂಪತ್ತು ನಾಶವಾಗಿರುವ ಸಂಭವವಿದೆ. ಸದ್ಯ ಅರಣ್ಯ ಇಲಾಖೆಯ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

ದಕ ಜಿಲ್ಲಾ ವಿಭಾಗದ ಘಾಟಿ ಪ್ರದೇಶ ಈ ಸ್ಥಳಕ್ಕೆ ಹತ್ತಿರವಿದ್ದು ಅಲ್ಲಿಗೂ ಬೆಂಕಿ ವ್ಯಾಪಿಸುವ ಭೀತಿ ಇದೆ.

ಚಾರ್ಮಾಡಿ ಘಾಟಿಯಲ್ಲಿ ಹೆಚ್ಚಾಗಿ ಬೇಸಿಗೆಯಲ್ಲಿ ಪ್ರತಿ ವರ್ಷ ಬೆಂಕಿ ಅನಾಹುತ ಉಂಟಾಗುತ್ತಿದ್ದು ಹಲವು ಎಕರೆ ಪ್ರದೇಶ ನಾಶವಾಗುತ್ತಿದೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ೭೦/೮೦ವರ್ಷಗಳಿಂದಲೂ ಬೇಟೆಗಾರರು ಬೆಟ್ಟ/ಬೊಟ್ಟ(ತುಳು)
    ಗುಡ್ಡಗಳಿಗೆ ಬೇಟೆಗಾಗಿ ಹೋಗಿ 10/15/20ದಿನಗಳ ದೀರ್ಘಕಾಲ
    ಅಲ್ಲೇ ಸುರಕ್ಷಿತ ಸ್ಥಳದಲ್ಲಿ ಉಳಿದುಕೊಂಡು,ಬೇಟೆಯಾಡಿದ ಪ್ರಾಣಿ ಗಳ ಮಾಂಸವನ್ನು ಬೇಯಿಸಿ,ಅಲ್ಪಸ್ವಲ್ಪ ಒಣಗಿಸಿ ಮರಳುವಾಗ ಮೂಲೆಗಳಲ್ಲಿ ಹೊತ್ತು ತರುತ್ತಾರೆ.ಈ ಬೇಟೆಗಾರರ ಎಲ್ಲಾ ಮಾಹಿತಿ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗಿದ್ದು,ಇವರೂ ಶಾಮೀಲಾಗಿ ರುತ್ತಾರೆ.ಆ ಮಾಂಸ ಬೇಯಿಸಿದ ಅಥವಾ ಚಳಿಯಿಂದ ರಕ್ಷಣೆ ಪಡೆಯಲು ಬೆಂಕಿ ಹಾಕುವ ಪರಿಪಾಠವಿದೆ.ನಮ್ಮ ಆಸುಪಾಸಿನ ಮಂದಿ ಬಾಲ್ಯದಲ್ಲಿ ಹೇಳಿಕೊಂಡ ರೋಚಕ ಘಟನೆಗಳು,ಬೇಟೆಯ
    ವರ್ಣನೆ ತಿಳಿದಿದೆ. ಈ ಜನರ ನಿರ್ಲಕ್ಷ್ಯ ಧೋರಣೆಯಿಂದ ಈ ಅವಘಡಗಳು ನಡೆಯುವುದು ಸರ್ವವೇದ್ಯ.

LEAVE A REPLY

Please enter your comment!
Please enter your name here

error: Content is protected !!