ಹೊಸದಿಗಂತ ವಿಜಯನಗರ:
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ರಾಯರಕೆರೆ ಹತ್ತಿರ ಶಾರ್ಟ್ ಸರ್ಕ್ಯೂಟ್ ನಿಂದ 100 ವರ್ಷ ಹಳೆಯ ವಿಂಟೇಜ್ ಕಾರು ಧಗಧಗನೆ ಹೊತ್ತಿ ಉರಿದ ಘಟನೆ ನಡೆದಿದೆ.
ಪ್ರವಾಸೋದ್ಯಮ ಕ್ಷೇತ್ರ ಆಕರ್ಷಣೆಗಾಗಿ ಹೊಸಪೇಟೆ, ಹಂಪಿ ಭಾಗದಲ್ಲಿ ಸಂಚರಿಸಿದ್ದ ವಿಂಟೇಜ್ ಕಾರ್ ರ್ಯಾಲಿ ಸಂಭ್ರಮದಲ್ಲಿ 100 ವರ್ಷ ಪೂರೈಸಿದ್ದ 20 ಕಾರುಗಳು ಭಾಗಿಯಾಗಿದ್ದವು.
ಹೊಸಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಧಗಧಗನೆ ಹೊತ್ತು ಉರಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ.