ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್ನ ಮೆಡ್ಚಲ್ ಪ್ರದೇಶದಲ್ಲಿ ನಡುರಸ್ತೆಯಲ್ಲಿ ಯುವಕನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಜನನಿಬಿಡ ಹೆದ್ದಾರಿಯ ಮಧ್ಯದಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಕಾಮರೆಡ್ಡಿ ಜಿಲ್ಲೆಯ ಮಾಚ ರೆಡ್ಡಿ ಗ್ರಾಮದ ನಿವಾಸಿ ಉಮೇಶ್ ಅವರ ಮೇಲೆ ಹರಿತವಾದ ಆಯುಧಗಳಿಂದ ಇಬ್ಬರು ದುಷ್ಕರ್ಮಿಗಳು ದಾಳಿ ಮಾಡಿ ಕೊಲೆ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಆಘಾತಕಾರಿ ಕೊಲೆ ನಡೆದಿದ್ದು, ವಾಹನ ಸವಾರರು ಭಯಭೀತರಾಗಿ ದೂರದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿದ್ದಾರೆ.
ಸ್ಥಳೀಯ ನಿವಾಸಿಗಳು ಈ ಭೀಕರ ದಾಳಿಯಿಂದ ಭಯಭೀತರಾಗಿದ್ದರು. ಕೊಲೆ ಮಾಡಿದ ನಂತರ, ಇಬ್ಬರು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಘಟನೆಯು ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಕೊಲೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
మేడ్చల్.. పట్టపగలు నడిరోడ్డుపై హత్య#Medchal #Hyderabad #Telangana #MedchalMurder pic.twitter.com/UTSmHj14WN
— తెనాలి రామకృష్ణుడు (@vikatakavi369) February 16, 2025