November 10, 2026
Tuesday, November 10, 2026
spot_img

ಶಾಕಿಂಗ್‌ ಮಾಹಿತಿ : ವಿಶ್ವದ 50 ಅತ್ಯಂತ ಮಾಲಿನ್ಯಯುಕ್ತ ನಗರಗಳ ಪೈಕಿ ಭಾರತದಲ್ಲೇ 49!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಪಟಾಕಿಯಿಂದ ಮಾತ್ರ ಮಾಲೀನ್ಯವಲ್ಲ, ಎಲ್ಲದರಿಂದಲೂ ಮಾಲೀನ್ಯ ಇದ್ದದ್ದೇ ಎಂದು ಪಟಾಕಿ ಹೊಡೆಯುವವರು ಹೊಡೆಯುತ್ತಿದ್ದಾರೆ. ನಾವು ಮಾಲೀನ್ಯ ಮಾಡೋದಿಲ್ಲ ಹಸಿರು ಪಟಾಕಿ ತಂದಿದ್ದೀವಿ ಎಂದುಕೊಂಡು ಮಾಮೂಲಿ ಪಟಾಕಿಯನ್ನೇ ಹೊಡೆಯುವ ಜನರೂ ಇದ್ದಾರೆ. ಪಟಾಕಿ ಹೊಡೆಯೋದಿಲ್ಲ, ಆದರೆ ಮನೆಯಲ್ಲಿರುವ ಐದು ಜನಕ್ಕೆ ಹತ್ತು ವಾಹನಗಳಿವೆ ಎನ್ನುವ ಮಂದಿಯೂ ಇದ್ದಾರೆ! ಗೊತ್ತೋ ಗೊತ್ತಿಲ್ಲದೆಯೋ ಜನ ವಾಯು ಮಾಲೀನ್ಯ ಮಾಡುತ್ತಿದ್ದಾರೆ. ವಿಶ್ವದ 50 ಅತ್ಯಂತ ಮಾಲಿನ್ಯಯುಕ್ತ ನಗರಗಳ ಪೈಕಿ ಭಾರತದಲ್ಲೇ 49 ನಗರಗಳಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಹೌದು, ವಿಶ್ವದ 50 ಅತ್ಯಂತ ಮಾಲಿನ್ಯಯುಕ್ತ ನಗರಗಳ ಪೈಕಿ ಭಾರತದ 49 ನಗರಗಳು ಸ್ಥಾನ ಪಡೆದುಕೊಂಡಿದ್ದು, ರಾಜಸ್ಥಾನದ ಶ್ರೀಗಂಗಾನಗರ ವಿಶ್ವದಲ್ಲೇ ಅತ್ಯಂತ ಮಾಲಿನ್ಯಯುಕ್ತ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ದೆಹಲಿ 24ನೇ ಸ್ಥಾನ ಪಡೆದುಕೊಂಡಿದೆ.

ರಾಜಸ್ಥಾನದ ಶ್ರೀಗಂಗಾನಗರ ವಿಶ್ವದಲ್ಲೇ ಅತಿ ಹೆಚ್ಚು ಮಾಲಿನ್ಯಯುಕ್ತ ನಗರವಾಗಿದ್ದು, ಶ್ರೀಗಂಗಾನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 821ಕ್ಕೆ ಏರಿಕೆಯಾಗಿದೆ. ಕ್ರಮವಾಗಿ ಪಂಜಾಬ್‌ನ ಬಟಿಂಡಾ ನಗರಕ್ಕೆ ಎರಡನೇ ಸ್ಥಾನ (ಎಕ್ಯೂಐ 629), ಹರಿಯಾಣದ ಸಿರ್ಸಾ ನಗರಕ್ಕೆ ಮೂರನೇ ಸ್ಥಾನ (ಎಕ್ಯೂಐ 544) ಪಡೆದುಕೊಂಡಿವೆ.

ಭಾರತದ ಯಾವ ನಗರಗಳು ಈ ಲಿಸ್ಟ್‌ನಲ್ಲಿವೆ ನೋಡಿ..

ಶ್ರೀ ಗಂಗಾನಗರ
ಬಟಿಂಡಾ
ಸಿರ್ಸಾ
ಹಿಸರ್‌
ಫರೀದ್‌ಕೋಟ್‌
ಪಟಿಯಾಲ
ಗುರುಗಾವ್‌
ಭಿವಾನಿ
ಬುಡೌನ್‌
ಲುಧಿಯಾನ
ಪಾಣಿಪತ್‌
ರೆವಾರಿ
ಅಮೃತಸರ
ಸೋನಿಪತ್‌
ಕರ್ನಾಲ್‌
ಫರೀದಾಬಾ
ರೋಹ್ಟಕ್‌
ಶ್ರೀನಗರ
ಜನೌಪುರ್‌
ಭಾರತ್‌ಪುರ್‌
ಗೋರಕ್‌ಪುರ್‌
ಗಾಝಿಪುರ್‌
ನವದೆಹಲಿ
ಜಲಂಧರ್‌
ಬೆಟ್ಟಿಯಾ
ಪ್ರಯಾಗ್‌ರಾಜ್‌
ಮೀರತ್‌
ಗ್ರೇಟರ್‌ ನೊಯ್ಡಾ
ಮುಝಾಫರ್‌ನಗರ್‌
ಆಗ್ರಾ
ಹಾಪುರ್‌
ಗ್ವಾಲಿಯರ್‌
ಸಹಸ್ರಾ
ಗಾಝಿಯಾಬಾದ್‌
ಫ್ಲೊರಝಾಬಾದ್‌
ನೋಯ್ಡಾ
ಅಲಿಗಢ
ಮುಝಾಫರ್‌ಪುರ್‌
ಖಾನ್ಪುರ್‌
ಮಥುರಾ
ಅಲ್ವಾರ್‌
ಸೀತಾಪುರ್‌
ಬುಕ್ಸಾರ್‌
ರೇವಾ
ಬುಲಂದರ್‌ಶಹರ್‌
ಹೊಶಿರಾಪುರ್‌
ಬೇಗುಸರಾಯ್‌
ಅಂಬಾಲ
ಅಜ್ಮೇರ್‌ ನಗರಗಳು ಪಟ್ಟಿಯಲ್ಲಿವೆ.

Must Read