ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಶಿವಪುರಿಯ ಕರೈರಾದ ನರ್ವಾರ್ ಪ್ರದೇಶದಲ್ಲಿ ವಾಯುಪಡೆಯ ಮಿರಾಜ್ 2000 ತರಬೇತಿ ವಿಮಾನ ಪತನಗೊಂಡಿದೆ .
ಅದೃಷ್ಟವಶಾತ್ ಪೈಲಟ್‌ಗಳಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಭಾರತೀಯ ವಾಯುಸೇನೆಗೆ ಸೇರಿದ ಯುದ್ಧ ವಿಮಾನ ನಿಯಂತ್ರಣ ತಪ್ಪುತ್ತಿದ್ದಂತೆ ವಸತಿ ಪ್ರದೇಶದಲ್ಲಿ ನೆಲಕ್ಕಪ್ಪಳಿಸುವುದನ್ನು ತಡೆಯುವಲ್ಲಿ ಪೈಲಟ್ ಯಶಸ್ವಿಯಾಗಿದ್ದಾರೆ.
ಹೊಲವೊಂದರಲ್ಲಿ ವಿಮಾನ ಪತನವಾಗುತ್ತಿದ್ದಂತೆ, ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಪೈಲಟ್‌ಗಳಿಬ್ಬರು ಸುರಕ್ಷಿತವಾಗಿ ಹೊರಕ್ಕೆ ಹಾರಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮನಸ್ಥರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.