SHOCKING NEWS | ಎಎಸ್‌ಐ ಮನೆಗೆ ನುಗ್ಗಿ ಪುತ್ರನ ಮೇಲೆ ಗುಂಡು ಹಾರಿಸಿ ದರೋಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಎಸ್‌ಐ ಪುತ್ರನ ಮೇಲೆ ಗುಂಡು ಹಾರಿಸಿ ಮನೆ ದರೋಡೆ ಮಾಡಿರುವಂತ ಘಟನೆ ನಡೆದಿದೆ.

ಜಿಲ್ಲೆಯ ಪರೇಸಂದ್ರ ಗ್ರಾಮದಲ್ಲಿನ ಬಾಗೇಪಲ್ಲಿ ಠಾಣೆಯ ಎಎಸ್‌ಐ ನಾರಾಯಣಸ್ವಾಮಿ ಎಂಬುವರ ಮನೆಗೆ ನಾಲ್ವರು ದರೋಡೆಕೋರರು ನುಗ್ಗಿದ್ದು, ಪುತ್ರನ ಮೇಲೆ ಗುಂಡು ಹಾರಿಸಿ ದರೋಡೆ ನಡೆಸಿದ್ದಾರೆ.

ಗುಂಡು ಹಾರಿಸಿದ್ದರಿಂದ ಹೆದರಿದ ಎಎಎಸ್‌ಐ ಪತ್ನಿ, ಸೊಸೆ ಮೈಮೇಲಿನ ಚಿನ್ನಾಭರಣ, ಮನೆಯಲ್ಲಿದ್ದ ನಗದನ್ನು ನಾಲ್ವರು ದರೋಡೆ ಕೋರರು ದೋಚಿಕೊಂಡು ಪರಾರಿಯಾಗಿದ್ದಾರೆ.

ಎಎಸ್‌ಐ ನಾರಾಯಣಸ್ವಾಮಿ ಮನೆಯವರ ಚೀರಾಟ ಕೇಳಿ ಸ್ಥಳೀಯರು ಬರುತ್ತಿದ್ದಂತೆ ದರೋಡೆ ಕೋರರು ಕಾಲ್ ಕಿತ್ತಿದ್ದಾರೆ. ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಶರತ್ ನನ್ನು ಚಿಕ್ಕಬಳ್ಳಾಪುರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಬಾಗೇಪಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!