Tuesday, March 28, 2023

Latest Posts

SHOCKING NEWS | ಗುಜರಾತ್ ನಲ್ಲಿ ಲಘು ಭೂಕಂಪನ: 4.3 ತೀವ್ರತೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಗುಜರಾತ್ ನಲ್ಲಿ ಇಂದು ಭಾನುವಾರ ಲಘು ಭೂಕಂಪ (Earthquake) ಸಂಭವಿಸಿರುವುದು ವರದಿಯಾಗಿದೆ.
ಭಾನುವಾರ ಮಧ್ಯಾಹ್ನ 3:21ಕ್ಕೆ ಸಂಭವಿಸಿದ ಭೂಕಂಪ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲಾಗಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (National Seismology Center) ತಿಳಿಸಿದೆ.
ಭೂಕಂಪದ ಕೇಂದ್ರಬಿಂದು ಗುಜರಾತ್​ನ ರಾಜಕೋಟ್​ನಿಂದ ವಾಯವ್ಯ ದಿಕ್ಕಿಗೆ (ನಾರ್ತ್ ವೆಸ್ಟ್) 270 ಕಿಮೀ ದೂರದ ಸ್ಥಳದಲ್ಲಿ ಇತ್ತು. ನೆಲದಿಂದ 10 ಕಿಮೀ ಆಳದಲ್ಲಿ ಕೇಂದ್ರ ಬಿಂದು ಇತ್ತೆಂದು ವರದಿಯಾಗಿದೆ.
ಯಾವುದೇ ಅನಾಹುತವಾದ ವರದಿ ಬಂದಿಲ್ಲ. ಕಳೆದ ವಾರ ಕೂಡ ಗುಜರಾತ್​ನ ಅಮರೇಲಿ ಜಿಲ್ಲೆಯಲ್ಲಿ ಎರಡು ದಿನಗಳ ಅಂತರದಲ್ಲಿ ಮೂರು ಲಘು ಭೂಕಂಪಗಳು ಸಂಭವಿಸಿದ್ದವು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!