SHOCKING NEWS | ರಾಯಲ್​ ಬೆಂಗಾಲ್​​​ ‘ರಾಜಾ’ ಇನ್ನಿಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದ ಅತ್ಯಂತ ಹಳೆಯ ಹುಲಿಗಳಲ್ಲಿ ಒಂದಾದ ರಾಯಲ್ ಬೆಂಗಾಲ್​ ‘ರಾಜಾ’ ಇಂದು ನಿಧನವಾಗಿದೆ.
ಇಂದು ಬೆಳಗ್ಗೆಪಶ್ಚಿಮ ಬಂಗಾಳದ ಜಲ್ದಪಾರಾ ಅರಣ್ಯ ಪ್ರದೇಶದಲ್ಲಿ ಈ ಹುಲಿ ಸಾವನ್ನಪ್ಪಿದ್ದಾಗಿ ಸಿಬ್ಬಂದಿ ತಿಳಿಸಿದ್ದಾರೆ. ಅದಕ್ಕೆ 25 ವರ್ಷ 10 ತಿಂಗಳು ಆಗಿತ್ತು ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2018ರಲ್ಲಿ ಸುಂದರಬನ್​​ ಅರಣ್ಯ ಪ್ರದೇಶದಲ್ಲಿ ಮೊಸಳೆ ಕಚ್ಚಿ ಒಂದು ಕಾಲು ಸಂಪೂರ್ಣವಾಗಿ ಕಳೆದುಕೊಂಡಿದ್ದ ರಾಯಲ್​ಗೆ ಬೆಂಗಾಲ್​ ಟೈಗರ್ ರಾಜಾಗೆ ಕೃತಕ ಕಾಲು ಜೋಡಣೆ ಮಾಡಲಾಗಿತ್ತು. ಅಂದಿನಿಂದಲೂ ದಕ್ಷಿಣ ಖೈರ್‌ಬರಿಯಲ್ಲಿರುವ ರಾಯಲ್ ಬೆಂಗಾಲ್ ಹುಲಿ ಪುನರ್ವಸತಿ ಕೇಂದ್ರದಲ್ಲಿ ಉಳಿದುಕೊಂಡಿತ್ತು.
ಕಳೆದ ಆಗಸ್ಟ್ ತಿಂಗಳಲ್ಲಿ ಈ ಹುಲಿಯ 25ನೇ ವರ್ಷದ ಹುಟ್ಟುಹಬ್ಬ ಸಂಭ್ರಮಾಚರಣೆ ಮಾಡಲಾಗಿತ್ತು. ಹುಲಿಯಲ್ಲಿ ಯಾವುದೇ ರೀತಿಯ ಗಂಭೀರ ಅನಾರೋಗ್ಯ ಕಂಡು ಬಂದಿರಲಿಲ್ಲ. ಆದರೆ, ವೃದ್ಧಾಪ್ಯ ಸಂಬಂಧಿತ ಸಮಸ್ಯೆಯಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಪಶು ವೈದ್ಯರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!