Tuesday, March 28, 2023

Latest Posts

SHOCKING NEWS: ಇಹಲೋಕ ತ್ಯಜಿಸಿದ ತೆಲುಗು ನಟ ತಾರಕರತ್ನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಚಿತ್ರರಂಗದಲ್ಲಿ ಶನಿವಾರ ಮತ್ತೊಂದು ದುರಂತ ಸಂಭವಿಸಿದ್ದು ನಂದಮೂರಿ ನಾಯಕ ತಾರಕ ರತ್ನ(39) ನಿಧನ ಹೊಂದಿದ್ದಾರೆ. ಕಳೆದ 22 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಂಜೆ ಕೊನೆಯುಸಿರೆಳೆದಿದ್ದಾರೆ.

ಅನಿರೀಕ್ಷಿತ ಬೆಳವಣಿಗೆಯಲ್ಲಿ ಶನಿವಾರ ಅವರ ಆರೋಗ್ಯ ಮತ್ತೆ ಹದಗೆಟ್ಟು ನಾರಾಯಣ ಹೃದಯಾಲಯದ ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ.ತಾರಕರತ್ನ ಮರಳಿ ಬಾರದ ಲೋಕಕ್ಕೆ ಹೋಗಿದ್ದಾರೆ.

ಇತ್ತೀಚೆಗೆ ನಾರಾ ಲೋಕೇಶ್ ಆಯೋಜಿಸಿದ್ದ ‘ಯುವಗಳಂ’ ಪಾದಯಾತ್ರೆ ವೇಳೆ ಅವರು ಅಸ್ವಸ್ಥರಾಗಿದ್ದರು. ತಕ್ಷಣ ತಾರಕರತ್ನ ಅವರನ್ನು ಕುಪ್ಪಂ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರಿಸಲಾಗಿತ್ತು. ತಾರಕರತ್ನ ಅವರನ್ನು ರಕ್ಷಿಸಲು ವೈದ್ಯರು ಶಕ್ತಿಮೀರಿ ಪ್ರಯತ್ನಿಸಿದರು. ಯಾವುದೇ ಫಲ ಸಿಗಲಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!