ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ರಾಷ್ಟ್ರೀಯ ಲೋಕದಳ ಪಕ್ಷದ ಹರಿಯಾಣ ಅಧ್ಯಕ್ಷ ನಫೆ ಸಿಂಗ್ ರಾಥಿ ಗುಂಡಿನ ದಾಳಿಗೆ ಮೃತಪಟ್ಟಿದ್ದಾರೆ.
ಹರಿಯಾಣದ ಝಜ್ಜಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ನಫೆ ಸಿಂಗ್ ರಾಥಿ ಸೇರಿದಂತೆ ಆಪ್ತರು ಎಸ್‌ಯುವಿ ಕಾರಿನ ಮೂಲಕ ತೆರಳುತ್ತಿದ್ದ ವೇಳೆ ಅಪರಿಚಿತರು ಆಗಮಿಸಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಈ ದಾಳಿಯಲ್ಲಿ ನಫೆ ಸಿಂಗ್ ರಾಥಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಆಸ್ಪತ್ರೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮೈತ್ರಿ ಪಕ್ಷಗಳಿಗೆ ಬೆಂಬಲ, ಅಭ್ಯರ್ಥಿಗಳ ಘೋಷಣೆ ಸೇರಿದಂತೆ ಹಲವು ಕಾರ್ಯಗಳ ನಿಮಿತ್ತ ಮಾಜಿ ಶಾಸಕ ನಫೆ ಸಿಂಗ್ ರಾಥಿ ಹಾಗೂ ಆಪ್ತರು ಕಾರಿನ ಮೂಲಕ ತೆರಳುತ್ತಿದ್ದರು. ಝಜ್ಜರ್ ಜಿಲ್ಲೆಯಲ್ಲಿ ಸಾಗುತ್ತಿದ್ದಂತೆ, ಅಪರಿಚಿತರು ಬೇರೊಂದು ಕಾರಿನ ಮೂಲಕ ಹಿಂಬಾಲಿಸಿದ್ದಾರೆ.