ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್ಗಡದಲ್ಲಿ ಚುನಾವಣೆಗೆ ಇನ್ನು ಮೂರು ದಿನವಿರುವಾಗಲೇ ವಾವೋವಾದಿಗಳು ದಾಳಿ ನಡೆಸಿದ್ದಾರೆ. ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ನಾರಾಯಣಪುರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರತನ್ ದುಬೆ ಮಾವೋವಾದಿಗಳ ದಾಳಿಗೆ ಬಲಿಯಾಗಿದ್ದಾರೆ.
ಬಿಜೆಪಿ ಪರ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ರತನ್ ದುಬೆ ಟಾರ್ಗೆಟ್ ಮಾಡಿ ದಾಳಿ ಮಾಡಲಾಗಿದೆ.
ಈ ಬಾರಿ ಛತ್ತೀಸಘಡದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೇರಿಸಲು ಸತತ ಕೆಲಸ ಮಾಡುತ್ತಿದ್ದರು. ಸರ್ಕಾರದ ವೈಫಲ್ಯದ ಜೊತೆಗೆ ಬಿಜೆಪಿಯ ಅಭಿವೃದ್ಧಿಯನ್ನು ಜನರಿಗೆ ಮುಟ್ಟಿಸಿದ್ದರು. ಇದೇ ವೇಳೆ ನಕ್ಸಲ್, ಮಾವೋವಾದಿ ಮುಕ್ತ ರಾಜ್ಯವನ್ನಾಗಿ ಮಾಡಲು ಬಿಜೆಪಿ ಪ್ರಮಾಣಿಕ ಪ್ರಯತ್ನ ಮಾಡಲಿದೆ ಎಂದಿದ್ದರು. ಇದು ವಾವೋವಾದಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.
ನಾರಾಯಣಪುರ ಜಿಲ್ಲೆಯ ಕೌಶಾಲ್ನಾರ್‌ದಲ್ಲಿ ಬಿಜೆಪಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ವೇಲೆ ವಾವೋವಾದಿಗಳು ದಾಳಿ ಮಾಡಿದ್ದಾರೆ. ಭೀಕರ ದಾಳಿಯಲ್ಲಿ ರತನ್ ದುಬೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.