SHOCKING | ಟೀ ಪ್ರಿಯರೇ ಹುಷಾರ್!‌ ಬ್ರಾಂಡೆಡ್‌ ಟೀ ಪ್ಯಾಕಿನಲ್ಲಿ ನಕಲಿ ಪುಡಿ ಕಲಬೆರಕೆ

ಹೊಸದಿಂಗತ ಡಿಜಿಟಲ್ ಡೆಸ್ಕ್:

ಬ್ರಾಂಡೆಡ್‌ ಟೀ ಪುಡಿ ಎಂದು ಹೆಸರಾಂತ ಟೀ ಕಂಪನಿಗಳ ಪ್ಯಾಕ್‌ ನೋಡಿ ತೆಗೆದುಕೊಂಡರೆ, ಟೀ ಮಾಡಿ ಕುಡಿದ ಮೇಲೆಯೇ ನೀವು ಮೋಸ ಹೋದದ್ದು ಗೊತ್ತಾಗುತ್ತದೆ. ಇಂಥ ನಕಲಿ ಟೀ ಪೌಡರ್‌ ಕಲಬೆರಕೆ ಹಾಗೂ ನಕಲಿ ಡಿಟರ್ಜೆಂಟ್‌ ಪೌಡರ್‌ ಮಿಕ್ಸಿಂಗ್‌ ನ ಕರಾಳ ಜಾಲವೊಂದು ಪತ್ತೆಯಾಗಿದೆ.

3 ರೋಸಸ್‌, ತಾಜ್‌ಮಹಲ್‌ ಮುಂತಾದ ಬ್ರಾಂಡೆಡ್ ಟೀ ಕುಡಿದರೂ ಬಾಯಿಗೆ ರುಚಿ ಸಿಕ್ತಿಲ್ಲ, ರಿನ್, ಸರ್ಫ್‌ ಎಕ್ಸೆಲ್ ಪೌಡರ್ ಹಾಕಿದರೂ ಬಟ್ಟೆಯಲ್ಲಿನ ಕೊಳೆ ಹೋಗ್ತಿಲ್ಲ ಎಂದಾದರೆ ನೀವು ಬಳಸುತ್ತಿರುವ ಟೀ ಪುಡಿ‌ ಮತ್ತು ಡಿಟರ್ಜೆಂಟ್ ಅಸಲಿ ಅಲ್ಲದೆ ನಕಲಿ ಆಗಿರಬಹುದು. ಬ್ರಾಂಡೆಡ್ ಪದಾರ್ಥಗಳಿಗೆ ಅಗ್ಗದ ನಕಲಿ ದ್ರವ್ಯಗಳನ್ನು ಕಲಬೆರಕೆ ಮಾಡುವ ಜಾಲವನ್ನು ಅಧಿಕಾರಿಗಳು ಇದೀಗ ಬಯಲಿಗೆಳೆದಿದ್ದಾರೆ.

ಬೆಂಗಳೂರು ನಗರದ ಹೊರವಲಯದ ಮಾದನಾಯಕನಹಳ್ಳಿಯಲ್ಲಿ ಈ ಅಕ್ರಮದ ಅಡ್ಡೆ ನಡೆಯುತ್ತಿತ್ತು. ಹಿಂದೂಸ್ಥಾನ್ ಯೂನಿ‌ಲಿವರ್ ಸಂಸ್ಥೆಯ ಅಧಿಕಾರಿಗಳ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಆಗ ಇಲ್ಲಿದ್ದ ನಕಲಿ 3 ರೋಜಸ್ ಟೀ ಪುಡಿ ಜಾಲ ಕಂಡು ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ನಕಲಿ ಟೀ ಪುಡಿ ಮತ್ತು ಸರ್ಫ್ ಎಕ್ಸೆಲ್ ಫ್ಯಾಕ್ಟರಿ ನಡೆಸುತ್ತಿದ್ದ ಬೂಮರಾಮ್, ಮಾಧು ಸಿಂಗ್, ವಿಕ್ರಮ್ ಸಿಂಗ್ ಮತ್ತು ಶಿವಕುಮಾರ ಎಂಬವರನ್ನು ದಾಳಿಯ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದಾರೆ. ಇವರು ಬ್ರಾಂಡೆಡ್ ಪ್ಯಾಕ್‌ನಲ್ಲಿ ನಕಲಿ ಟೀ ಪುಡಿ ತುಂಬಿ, ಸಣ್ಣ ಸಣ್ಣ ಪ್ಯಾಕ್‌ಗಳಾಗಿ ಮಾಡುತ್ತಿದ್ದರು. ನಕಲಿ ಬ್ರಾಂಡ್‌ಗಳನ್ನು ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ರಾಮನಗರ, ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿದ್ದರು.

ದಾಳಿ ವೇಳೆ ಲಕ್ಷಾಂತರ ರೂ. ಮೌಲ್ಯದ ಟೀ ಪುಡಿ ಮತ್ತು ಡಿಟರ್ಜೆಂಟ್ ಪೌಡರ್ ಸೀಜ್ ಮಾಡಿಕೊಳ್ಳಲಾಗಿದ್ದು. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!