ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ವೈಯಾಲಿಕಾವಲ್‌ನಲ್ಲಿ ಮಹಾಲಕ್ಷ್ಮೀ ಕೊಲೆಗೈದು ಫ್ರಿಜ್ನಲ್ಲಿ ಮೃತ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದ ಶಂಕಿತ ಆರೋಪಿ ಒಡಿಶಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಮುಕ್ತಿರಂಜನ್ ರಾಯ್ ಆತ್ಮಹತ್ಯೆ ಮಾಡಿಕೊಂಡ ಶಂಕಿತ ಕೊಲೆ ಆರೋಪಿ.
ಈತ ಮಹಾಲಕ್ಷ್ಮಿ ಕೊಲೆ ಬಳಿಕ ತಲೆಮರೆಸಿಕೊಂಡು ಓಡಾಡುತ್ತಿದ್ದ. ಈ ಸಂಬಂಧ ವಿಚಾರಣೆಗೆ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸರು ಒಡಿಶಾಗೆ ತೆರಳಲು ಮುಂದಾಗಿದ್ದಾದ್ದರು.
ಸೆಪ್ಟೆಂಬರ್ 1ರ ತನಕ ಮಹಾಲಕ್ಷ್ಮಿ ಕೆಲಸಕ್ಕೆ ಹೋಗಿದ್ದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2 ಅಥವಾ 3 ರಂದು ಕೊಲೆ ಆಗಿರಬಹುದು ಎಂದು ಪೊಲೀಸರು ಸದ್ಯಕ್ಕೆ ಅಂದಾಜಿಸಿದ್ದಾರೆ. ಇನ್ನೂ ಆಕೆ ಕೆಲಸ ಮಾಡ್ತಿದ್ದ ಶಾಪ್‌ನ ಟೀಂ ಲೀಡರ್ ಮುಕ್ತಿರಂಜನ್ ಕೂಡ ಸೆಪ್ಟೆಂಬರ್ 1ರ ನಂತರ ಕೆಲಸಕ್ಕೆ ಬಾರದೇ ಇರೋದು ಹಲವು ಅನುಮಾಗಳಿಗೆ ಕಾರಣವಾಗಿತ್ತು. ಒಡಿಶಾದಲ್ಲಿ ಹಂತಕ ಇರುವ ಶಂಕೆ ಮೇರೆಗೆ ಪೊಲೀಸರು ಅಲ್ಲಿಗೆ ತೆರಳಿದ್ದರು. ಕೊಲೆ ಪ್ರಕರಣದ ಬಗ್ಗೆ ಒಡಿಶಾ ಪೊಲೀಸರಿಗೂ ಸಹ ಮಾಹಿತಿ ನೀಡಿದ್ದರು.
ಈ ಮಧ್ಯೆ, ಮಹಾಲಕ್ಷ್ಮಿ ಶವವನ್ನು 59 ತುಂಡು ಮಾಡಿರುವ ಹಂತಕ ತುಂಬಾನೆ ಅಪಾಯಕಾರಿ ಎಂದು ಮನೋವೈದ್ಯರು ವಿಶ್ಲೇಷಣೆ ಮಾಡಿದ್ದರು.