ಮೆಕ್ಸಿಕೋದಲ್ಲಿ ಬಂದೂಕು ಧಾರಿಗಳಿಂದ ಗುಂಡಿನ ದಾಳಿ: ಮೇಯರ್‌ ಸೇರಿದಂತೆ 18 ಜನರ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದಕ್ಷಿಣ ಮೆಕ್ಸಿಕೋದ ಸಣ್ಣ ಪಟ್ಟಣದಲ್ಲಿ ಮುನ್ಸಿಪಲ್ ಹಾಲ್ ಮತ್ತು ಮನೆಯೊಂದರಲ್ಲಿ ಬಂದೂಕುಧಾರಿಗಳು ಗುಂಡು ಹಾರಿಸಿ ಮೇಯರ್ ಸೇರಿದಂತೆ 18 ಜನರನ್ನು ಕೊಂದಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಶಸ್ತ್ರಸಜ್ಜಿತ ಗುಂಪು, ಸ್ಕೀ ಮುಖವಾಡಗಳನ್ನು ಧರಿಸಿ ಎರಡು SUV ಗಳಲ್ಲಿ ಧಾವಿಸಿ, ಕಾನ್ರಾಡೋ ಮೆಂಡೋಜಾ ಮತ್ತು ಅವರ ತಂದೆ ಜುವಾನ್ ಮೆಂಡೋಜಾ, ಸ್ಯಾನ್ ಮಿಗುಯೆಲ್ ಟೊಟೊಲಾಪನ್‌ನ ಮೇಯರ್ ಮತ್ತು ಮಾಜಿ ಮೇಯರ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಹತ್ತು ಬಲಿಪಶುಗಳನ್ನು ಅಧಿಕಾರಿಗಳು ಗುರುತಿಸಿದ್ದು ಹೆಚ್ಚಿನವರು ಸ್ಥಳೀಯ ಸರ್ಕಾರದ ಸದಸ್ಯರು ಎಂದು ಮೂಲಗಳು ಉಲ್ಲೇಖಿಸಿದೆ.

ಈ ಮಾರಣಾಂತಿಕ ದಾಳಿಯು ಆಗಸ್ಟ್‌ನಲ್ಲಿ ಮಡೆದ ಗ್ಯಾಂಗ್ ಹಿಂಸಾಚಾರದ ನಂತರ ಬಂದಿದೆ, ಈ ಸಂಬಂಧ ತನಖೆ ನಡೆಸಲಾಗುತ್ತಿದ್ದು ಯಾವುದೇ ಬಿಗುವಿನ ವಾತಾವರಣ ನಿರ್ಮಾಣವಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!