ರಾಮಸೇತು, ಆದಿಪುರುಷ್‌ ಚಿತ್ರಗಳ ಶೂಟಿಂಗ್‌ ಆಗಿದ್ ಫಿಲ್ಮ್‌ ಸ್ಟುಡಿಯೋ ಧ್ವಂಸ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮುಂಬೈ ಮಹಾನಗರ ಪಾಲಿಕೆ ಶುಕ್ರವಾರ ಬರೋಬ್ಬರಿ 1 ಸಾವಿರ ಕೋಟಿ ರೂಪಾಯಿ ಬೆಲೆಬಾಳುವ ಫಿಲ್ಮ್‌ ಸ್ಟುಡಿಯೋವನ್ನು ಧ್ವಂಸ ಮಾಡಿದೆ.

ಮುಂಬೈನ ಮಧ್‌ ಪ್ರದೇಶದಲ್ಲಿ ಸಮುದ್ರಮುಖಿಯಾಗಿ ನಿರ್ಮಾಣವಾಗಿದ್ದ ಐಷಾರಾಮಿ ಫಿಲ್ಮ್‌ ಸ್ಟುಡಿಯೋದಲ್ಲಿ ಅಕ್ಷಯ್‌ ಕುಮಾರ್‌ ಅಭಿನಯದ ರಾಮಸೇತು, ಆದಿಪುರುಷ್‌ ಚಿತ್ರಗಳ ಶೂಟಿಂಗ್‌ ನಡೆದಿತ್ತು. ಇದೀಗ ಇದು ಅಕ್ರಮವಾಗಿ ಕಟ್ಟಿರುವ ಸ್ಟೂಡಿಯೋ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಸಂಸದ ಕಿರೀಟ್‌ ಸೋಮಯ್ಯ ಬಿಎಂಸಿಗೆ ದೂರು ದಾಖಲು ಮಾಡಿದ್ದರು.

ಮಾಜಿ ಸಚಿವರಾದ ಆದಿತ್ಯ ಠಾಕ್ರೆ ಮತ್ತು ಅಸ್ಲಾಂ ಶೇಖ್ ಅವರ ಸೂಚನೆಯ ಮೇರೆಗೆ ಈ ಅಕ್ರಮ ಸ್ಟುಡಿಯೋ ನಿರ್ಮಿಸಲಾಗಿದೆ ಎಂದು ಅವರು ಆರೋಪ ಮಾಡಿದ್ದರು.

5 ಲಕ್ಷ ಚದರ ಅಡಿಗಳಷ್ಟು ವಿಸ್ತಾರವಾಗಿರುವ ಈ ಹೈಟೆಕ್ ಸ್ಟುಡಿಯೋವನ್ನು 2021 ರಲ್ಲಿ ನಿರ್ಮಾಣ ಮಾಡಲಾಗಿತ್ತು. ಇದರ ನಿರ್ಮಾಣಕ್ಕೆ 1 ಸಾವಿರ ಕೋಟಿಗಿಂತಲೂ ಅಧಿಕ ವೆಚ್ಚವಾಗಿದೆ ಎಂದು ಹೇಳಲಾಗಿದೆ.

ಬೆಳಗ್ಗೆ 11 ಗಂಟೆ ಸುಮಾರಿಗೆ ಬಿಜೆಪಿ ಮುಖಂಡ ಕಿರೀಟ್ ಸೋಮಯ್ಯ ಸ್ಟುಡಿಯೋಗೆ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಠಾಕ್ರೆ ಸರ್ಕಾರದ ಭ್ರಷ್ಟಾಚಾರದ ಸ್ಮಾರಕ ಇಂದು ಧ್ವಂಸಗೊಂಡಿದೆ. . ಈ ನಿರ್ಮಾಣದ ವಿರುದ್ಧ ಎರಡು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೆವು ಎಂದು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!