Thursday, February 9, 2023

Latest Posts

ಚೆಕ್ ಪೋಸ್ಟ್ ಬಳಿ ಶೂಟ್‌ಔಟ್ ಪ್ರಕರಣ: ಹತ್ತಕ್ಕೂ ಅಧಿಕ ಮಂದಿ ವಿರುದ್ಧ ಎಫ್ಐಆರ್‌

ಹೊಸದಿಗಂತ ವರದಿ ಕಲಬುರಗಿ: 

ಕಲಬುರಗಿ ನಗರದ ಚೆಕ್ ಪೋಸ್ಟ್ ಬಳಿ ಶನಿವಾರ ಮಧ್ಯಾಹ್ನ ನಡೆದ ಗುಂಡಿನ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತಕ್ಕೂ ಅಧಿಕ ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಬಸಯ್ಯಾ ಗುತ್ತೇದಾರ, ದಸ್ತಯ್ಯಾ ಗುತ್ತೇದಾರ, ರಾಜು, ಶಾಂತಿಬಾಯಿ ಸೇರಿದಂತೆ ಹತ್ತಕ್ಕೂ ಅಧಿಕ ಜನರ ವಿರುದ್ಧ ನಗರದ ಸಬ್ ಅರ್ಬನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜೈ ಭವಾನಿ ಮರಾಠ ಖಾನಾವಳಿ ಸ್ಥಳದ ವಿವಾದಕ್ಕೆ ಸಂಬಂಧಿಸಿದಂತೆ ಫೈರಿಂಗ್ ನಡೆದಿದ್ದು, ಕಾಂಗ್ರೆಸ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ ಪಾಟೀಲ್ ಸಹೋದರ ಚನ್ನವೀರ ಪಾಟೀಲ್ ಮೇಲೆ ಗುಂಡು ಹಾರಿಸಲಾಗಿದೆ. ಘಟನೆಯಲ್ಲಿ ಚನ್ನವೀರ ಕೈಗೆ ಗುಂಡು ತಾಗಿದ್ದು, ಜೊತೆಗೆ ಅಬ್ಬುಬುಕರ್ ಎಂಬುವವರ ಕಾಲಿಗೆ ಗುಂಡು ಹೊಕ್ಕಿದೆ.

ದುಷ್ಕರ್ಮಿಗಳು ಬುಲೆರೋ ವಾಹನದಲ್ಲಿ ಬಂದು ಫೈರಿಂಗ ಮಾಡಿ, ವಾಹನವನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್ ಅರ್ಬನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!