ಬೆಂಕಿಯ ಜ್ವಾಲೆಗೆ ಹೊತ್ತಿ ಉರಿದ ಮುಂಬೈನ ಶಾಪ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಮುಂಬೈನಲ್ಲಿ ಮತ್ತೊಂದು ಬೆಂಕಿ ಅವಘಡ ವರದಿಯಾಗಿದೆ. ಅಂಧೇರಿಯ ಡಿಎನ್ ನಗರ ವಲಯದಲ್ಲಿನ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ.

1000 ಚದರ ಅಡಿಯ ಅಂಗಡಿ ಇದಾಗಿದ್ದು, ಭಾರಿ ಪ್ರಮಾಣದಲ್ಲಿ ಬೆಂಕಿ ಜ್ವಾಲೆ ಕಾಣಿಸಿಕೊಂಡಿದೆ. ಸ್ಟಾರ್ ಬಜಾರ್ ಸಮೀಪದ ಲಿಂಕ್ ರೋಡ್ ಬಳಿ ಇರುವ ಈ ಶಾಪ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ.
ಸ್ಥಳಕ್ಕೆ 10 ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಅದೃಷ್ಠವಶಾತ್ ಯಾವುದೇ ಸಾವು ನೋವಿನ ವರದಿಯಾಗಿಲ್ಲ.

ಮಹಾಲಕ್ಷ್ಮಿ ಎಸ್ಟೇಟ್ ಸಮೀಪದ ಚಿತ್ರಕೋಟ್ ಸ್ಟುಡಿಯೋ ಹಿಂಭಾಗದಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ. ಸಂಜೆ 4.30 ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಶಾಪ್ ಹೊತ್ತಿ ಉರಿದಿದೆ. ಇತ್ತ ಮಾಹಿತಿ ಪಡೆದು ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!