ಶಾರ್ಟ್ ಟೈಂ ಬ್ಲಾಸ್ಟ್ ಟೈಮರ್ ಮಾಸ್ಟರ್ ಪ್ಲಾನ್: ಕಹಾನಿ ಮೇ ಟ್ವಿಸ್ಟ್ ಕೊಟ್ಟ CCB 

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕುಂದಲಹಳ್ಳಿ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಗಳ ತನಿಖೆಯನ್ನು ತೀವ್ರಗೊಳಿಸಲಾಗಿದೆ. ಪೊಲೀಸರು ಸಿಸಿಟಿವಿ ವಿಡಿಯೋದ ಮೂಲಕ ಶಂಕಿತನನ್ನು ಗುರುತಿಸಲು ಸಾಧ್ಯವಾಗಿದ್ದು, ಅವನು ಕೃತ್ಯಕ್ಕೆ ಬಳಸಿದ ಸ್ಪೋಟಕದ ಬಗ್ಗೆ ವಿವರಗಳನ್ನು ಕಲೆಹಾಕಲಾಗಿದೆ. ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಅಲ್ಪಾವಧಿ ಬ್ಲಾಸ್ಟ್ ಟೈಮರ್ ಬಳಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಅದು ಮಾತ್ರವಲ್ಲದೆ ಆರೋಪಿಯ ಆಗಮನದ ಸಮಯವು ಅನೇಕ ಸುಳಿವುಗಳನ್ನು ನೀಡಿದೆ ಎನ್ನಲಾಗಿದೆ.

ಸಿಸಿಟಿವಿ ವೀಡಿಯೊದಲ್ಲಿ ಆರೋಪಿಯ ಅರ್ಧದಷ್ಟು ಮುಖ ಸ್ಪಷ್ಟವಾಗಿ ತೋರಿಸಿದೆ, ಮುಖದ ಹಾವ ಭಾವವನ್ನು ಕೂಡ ಸೆರೆಹಿಡಿಯಲಾಗಿದೆ. ರಾಮೇಶ್ವರಂನಲ್ಲಿರುವ ಕೆಫೆಗೆ ಬಂದ ವ್ಯಕ್ತಿ ತನ್ನೊಂದಿಗೆ ಸ್ಫೋಟಕಗಳನ್ನು ತಂದಿರುವುದು ಖಚಿತವಾಗಿದ್ದು, ಆರೋಪಿಗಾಗಿ ತನಿಖಾ ತಂಡ ಶೋಧ ನಡೆಸುತ್ತಿದೆ.

ಶಂಕಿತ ವ್ಯಕ್ತಿ ಬಿಎಂಟಿಸಿ ಬಸ್‌ನಲ್ಲಿ ರಾಮೇಶ್ವರಂ ಕೆಫೆಗೆ ಆಗಮಿಸಿ ಮೊದಲೇ ಟೈಮರ್ ಫಿಕ್ಸ್ ಮಾಡಿ ಬಂದಿದ್ದು ಬಳಿಕ ಸ್ಫೋಟಿಸಲು ಯೋಜಿಸಿದ್ದ ಎನ್ನಲಾಗಿದೆ. ಮೊದಮೊದಲು ಕೆಫೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆ ಸೆರೆಯಾಗದಂತೆ ಬಹಳ ಎಚ್ಚರ ವಹಿಸಿದ್ದ. ಸಿಸಿಟಿವಿ ಇಲ್ಲದ ಜಾಗದಲ್ಲಿ ಓಡಾಡಲು ಯತ್ನಿಸುತ್ತಿದ್ದ. ಬಾಂಬ್ ಇರುವ ಬ್ಯಾಗ್ ಇಡುವಾಗಲು ಕ್ಯಾಮೆರಾಗಳ ಕಣ್ಣನ್ನು ತಪ್ಪಿಸಿ ಇಟ್ಟಿದ್ದಾನೆ ಎನ್ನಲಾಗಿದೆ.

ನಿನ್ನೆ ಮಧ್ಯಾಹ್ನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ ನಂತರ, ಸಿಸಿಬಿ ತಡರಾತ್ರಿ ಭಾರೀ ಕಾರ್ಯಾಚರಣೆ ನಡೆಸಿ. ನಿನ್ನೆ ರಾತ್ರಿ ನಗರದ ಡಿ.ಜೆ.ಹಳ್ಳಿಯಲ್ಲಿ ವ್ಯಕ್ತಿಯೊಬ್ಬನನ್ನು ವಿಚಾರಣೆಗೊಳಪಡಿಸಲಾಗಿದ್ದು, ಸಿಸಿಬಿ ಪೊಲೀಸರು ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!