ದೆಹಲಿಯಲ್ಲಿ ಕೋರ್ಟ್‌ ಎದುರಲ್ಲೇ ಹಾರಿತು ಗುಂಡು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೆಹಲಿಯ ರೋಹಿಣಿ ಕೋರ್ಟ್‌ ಎದುರುನಲ್ಲಿ ಗುಂಡು ಹಾರಿರುವ ಕುರಿತು ವರದಿಯಾಗಿದೆ. ಇಂದು ಬೆಳಿಗ್ಗೆ 9.40 ರ ಸುಮಾರಿಗೆ ಘಟನೆ ನಡೆದಿದ್ದು ಗೇಟ್‌ ನಲ್ಲಿ ನಿಯೊಜನೆಗೊಂಡ ಭದ್ರತಾ ಸಿಬ್ಬಂದಿಯ ಆಯುಧದಿಂದ ಗುಂಡು ಹಾರಿದೆ ಎಂದು ವರದಿಗಳು ಹೇಳಿವೆ.

ಗೇಟ್‌ ಎದುರಲ್ಲಿ ಇಬ್ಬರು ವಕೀಲರು ಹಾಗೂ ಇನ್ನೊಬ್ಬ ವ್ಯಕ್ತಿಯ ನಡುವೆ ವಾಗ್ವಾದ ನಡೆದಿದ್ದು ಗೇಟ್‌ ನಲ್ಲಿ ನಿಯೋಜನೆಗೊಂಡಿದ್ದ ನಾಗಾಲ್ಯಾಂಡ್‌ ಸಶಸ್ತ್ರ ಪಡೆಯ ಭದ್ರತಾ ಸಿಬ್ಬಂದಿಯೊಬ್ಬ ಮಧ್ಯಪ್ರವೇಶ ಮಾಡಿದ್ದಾನೆ. ಈ ಸಂದರ್ಭದಲ್ಲಿ ಗುಂಡಿನ ಸದ್ದು ಭೋರ್ಗರೆದಿದೆ.

ಘಟನೆಯನ್ನು ದೆಹಲಿ ಪೋಲೀಸರು ಗಂಭಿರವಾಗಿ ಪರಿಗಣಿಸಿದ್ದು ತನಿಖೆ ಕೈಗೊಂಡಿದ್ದಾರೆ. ಗುಂಡು ಹಾರಲು ಕಾರಣವೇನೆಂಬುದನ್ನು ಪತ್ತೆ ಹಚ್ಚಲಾಗುತ್ತಿದ್ದು ಆಕಸ್ಮಿಕವಾಗಿ ಗುಂಡು ಹಾರಿದೆಯೇ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!