September 30, 2026
Wednesday, September 30, 2026
spot_img

ಮನಸ್ಸು, ದೇಹ ಎರಡೂ ಆರೋಗ್ಯಕರವಾಗಿರಬೇಕಾ? ಮನೆಗೊಂದು ನಾಯಿಮರಿ ತಂದುಬಿಡಿ

ಮನುಷ್ಯನ ಅತ್ಯುತ್ತಮ ಹಾಗೂ ನಿಸ್ವಾರ್ಥಿ ಸ್ನೇಹಿತನೆಂದರೆ ಅದು ನಾಯಿ ಮಾತ್ರ. ನಾಯಿ ಮನುಷ್ಯರಿಗಾಗಿ ತೋರುವ ನಿಷ್ಠೆ ಹಾಗೂ ಸೇವೆಯನ್ನು ಸ್ಮರಿಸಲು ಪ್ರತೀ ವರ್ಷ ಆಗಸ್ಟ್‌ 26ರಂದು ಅಂತಾರಾಷ್ಟ್ರೀಯ ನಾಯಿದಿನವನ್ನು ಆಚರಿಸಲಾಗುತ್ತದೆ.

ಬೀದಿನಾಯಿಗಳನ್ನು ದತ್ತು ಪಡೆಯಲು, ಪ್ರಾಣಿ ಕಲ್ಯಾಣದ ಬಗ್ಗೆ ಜಾಗೃತಿ ಮೂಡಿಸಲು, ಮನುಷ್ಯರಿಗೆ ನಾಯಿ ನೀಡುವ ರಕ್ಷಣೆ, ಸೇವೆ ಹಾಗೂ ಸಾಂತ್ವನಕ್ಕೆ ಇಂದು ಧನ್ಯವಾದ ಹೇಳುವ ದಿನ. ಯಾಕೋ ಮನಸ್ಸು ಸರಿ ಇಲ್ಲ, ದೇಹದ ಆರೋಗ್ಯವೂ ಕೈಕೊಡುತ್ತಿದೆ ಎಂದನಿಸದರೆ ಮನೆಗೊಂದು ಪುಟಾಣಿ ನಾಯಿಮರಿ ತಂದುಬಿಡಿ. ಇದು ಎಲ್ಲವನ್ನೂ ಮ್ಯಾಜಿಕ್‌ ರೀತಿಯಲ್ಲಿ ಸರಿ ಮಾಡಿಬಿಡುತ್ತದೆ.

ದೈಹಿಕ ಆರೋಗ್ಯ ಹೇಗೆ ವೃದ್ಧಿ?

ನಿತ್ಯವೂ ಎರಡು ಬಾರಿ ನಾಯಿಗೆ ವಾಕಿಂಗ್‌ ಮಾಡಿಸಲೇಬೇಕು. ಅದರ ಸ್ಪೀಡ್‌ಗೆ ನೀವು ವಾಕಿಂಗ್‌ ಮಾಡಿದ್ರೆ ಆರೋಗ್ಯ ತಂತಾನೆ ಚೆನ್ನಾಗಿ ಆಗುತ್ತದೆ.

ಮನೆಯಲ್ಲಿ ನಾಯಿ ಇರುವ ಜನರಿಗೆ ಬ್ಲಡ್‌ ಪ್ರೆಶರ್‌ ಅಥವಾ ಹೃದಯ ಸಂಬಂಧಿ ಅನಾರೋಗ್ಯ ಕಡಿಮೆ.

ನಾಯಿಗಳ ಜೊತೆ ಒಂದೇ ಮನೆಯಲ್ಲಿ ಇರುವವರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ.

ಮಾನಸಿಕ ಆರೋಗ್ಯಕ್ಕೆ ಹೇಗೆ ಉಪಯೋಗ?

ಮನೆಯಲ್ಲಿ ನಾಯಿಯಿದ್ದು, ಅದರ ಆರೈಕೆಯಲ್ಲಿ ತೊಡಗುವವರಿಗೆ ಒತ್ತಡ ಕಡಿಮೆ. ಸ್ಟ್ರೆಸ್‌ ಹಾರ್ಮೋನ್‌ ಆದ ಕಾರ್ಟಿಸೋಲ್‌ನ್ನು ಅದು ತಗ್ಗಿಸುತ್ತದೆ.

ನಾನು ಒಬ್ಬಂಟಿ ಎನ್ನುವ ಫೀಲಿಂಗ್‌ ಹೋಗಲಾಡಿಸುತ್ತದೆ. ಯಾವಾಗಲೂ ನನ್ನ ಜೊತೆಗೆ ನಾಯಿಯಿದೆ ಎನ್ನುವ ಸೆಕ್ಯೂರ್‌ ಫೀಲಿಂಗ್‌ ಸಿಗುತ್ತದೆ.

ಅದರ ಜೊತೆ ಆಟ ಆಡೋದು, ಖುಷಿ ಪಡೋದ್ರಿಂದ ಹೃದಯ ಖುಷಿಯಾಗಿರುತ್ತದೆ. ಮನಸ್ಸು ಹಗುರಾಗುತ್ತದೆ.

ಲೈಫ್‌ಸ್ಟೈಲ್‌ಗೆ ಏನು ಲಾಭ?

ನಾಯಿ ಸಾಕೋದಕ್ಕೆ ಸಮಯ ಇಲ್ಲ ಎಂದುಕೊಳ್ಳಬೇಡಿ. ಇಷ್ಟವಿರುವುದಕ್ಕೆ ಸಮಯ ಮಾಡಿಕೊಳ್ಳೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ನಾಯಿ ಮರಿಯನ್ನು ವಾಕಿಂಗ್‌ ಕರೆದುಕೊಂಡು ಹೋದಾಗ ಇತರ ಜನರು ಮಾತನಾಡಿಸ್ತಾರೆ. ಸೋಶಿಯಲೈಸ್‌ ಆಗ್ತೀರಿ. ನಾಯಿಯನ್ನು ಕೇರ್‌ ಮಾಡೋದ್ರಿಂದ ನಿಮ್ಮಲ್ಲಿ ಪ್ರೀತಿ ಇನ್ನೂ ಹೆಚ್ಚಾಗುತ್ತದೆ. ಅದು ಕೊಡುವ ಪ್ರೀತಿಗೆ ಇನ್ನಷ್ಟು ಕೇರ್‌ ಮಾಡೋಣ ಎನಿಸುತ್ತದೆ. ನಾಯಿಯನ್ನು ಭೇಟಿ ಮಾಡೋದಕ್ಕೆಂದೇ ಮನೆಗೆ ಜನರು ಬರುತ್ತಾರೆ. ನಿಮ್ಮ ಒಂಟಿತನ ಹೋಗಲಾಡಿಸುತ್ತಾರೆ.

Must Read