BABY CARE | ವರ್ಷದೊಳಗಿನ ಮಕ್ಕಳನ್ನು ಟ್ರಿಪ್ ಕರ‍್ಕೊಂಡು ಹೋಗ್ಬೇಕಾ? ಅವರಿಗೇನು ಗೊತ್ತಾಗೋಕೆ ಸಾಧ್ಯ?

ಮೊದಲ ಮಗು ಅಂದ್ರೆ ಬದಲಾವಣೆ ಅಂತಲೇ ಅರ್ಥ, ಸುತ್ತಾಡ್ಕೊಂಡು ಇದ್ದ ನಿಮ್ಮ ಕೈಗೆ ಮಗುವೊಂದನ್ನು ಕೊಟ್ಟು ರಾತ್ರಿ ಹಗಲು ಅನ್ನದೇ ಆರೈಕೆ ಮಾಡಿ ಅನ್ನೋ ಹಾಗೆ ಆಗುತ್ತದೆ. ಕೆಲವು ತಿಂಗಳು ಮಕ್ಕಳನ್ನು ಜೋಪಾನ ಮಾಡಿದ ನಂತರ ಅವರನ್ನು ಕರೆದುಕೊಂಡು ಹೊರಗೆ ಹೋಗಬಹುದು, ಸುತ್ತಾಡಬಹುದು, ನಿಮ್ಮ ಟ್ರಾವೆಲಿಂಗ್ ಆಸೆಯನ್ನು ಈಡೇರಿಸಿಕೊಳ್ಳಬಹುದು. ಮಕ್ಕಳಿಗೇನು ಗೊತ್ತಾಗೋಕೆ ಸಾಧ್ಯ, ಅವರನ್ನು ಬಿಟ್ಟು ಟ್ರಿಪ್ ಮಾಡೋಣ ಅಂದುಕೊಂಡಿದೀರಾ? ಅವರಿಗೆ ಎಲ್ಲಾ ಗೊತ್ತಾಗತ್ತೆ, ಮಕ್ಕಳ ಜೊತೆ ಟ್ರಿಪ್ ಯಾಕೆ ಮಾಡಬೇಕು ನೋಡಿ..

  • ಮಕ್ಕಳಿಗಾಗಿ ಅಡ್ಜಸ್ಟ್ ಮಾಡಿಕೊಳ್ಳೋ ನೇಚರ್ ನಿಮಗೆ ಬೆಳೆಯುತ್ತದೆ, ಗುಡ್ ಫ್ಯಾಮಿಲಿ ಟೈಮ್ ನಿಮ್ಮದಾಗುತ್ತದೆ.
  • ಪೋಷಕರಾಗಿ ನಿಮ್ಮನ್ನು ನೀವು ಗುರುತಿಸಿಕೊಳ್ಳೋದು ಮುಖ್ಯ, ಬೇರೆ ವಾತಾವರಣದಲ್ಲಿ ನೀವು ಮಕ್ಕಳ ಜೊತೆ ಡೀಲ್ ಮಾಡುವಾಗ ನೀವು ಎಂತಹ ಪೇರೆಂಟ್ಸ್ ಎನ್ನೋದು ತಿಳಿಯುತ್ತದೆ.
  • ಹೊಸ ರೀತಿಯ ವಾತಾವರಣದಲ್ಲಿ ಮಕ್ಕಳು ಓಡಾಡೋದು ಅವರ ಬೆಳವಣಿಗೆಗೆ ಸಹಕಾರಿ, ಜನರ ಜತೆ ಮಿಂಗಲ್ ಆಗೋದಕ್ಕೆ ಸಹಾಯ ಆಗುತ್ತದೆ.
  • ನಿಮ್ಮ ಟ್ರಾವೆಲಿಂಗ್ ನೆನಪುಗಳಲ್ಲಿ ಮಕ್ಕಳೂ ಇರುತ್ತಾರೆ, ನಿಮ್ಮ ತಂದೆ ತಾಯಿ ನೀನು ಸಣ್ಣವನಿದ್ದಾಗ ನಾವು ಊಟಿಗೆ ಕರ‍್ಕೊಂಡು ಹೋಗಿದ್ವಿ, ನೀನು ನೀರಿನಲ್ಲಿ ಇಳಿಯೋಕೆ ಹೆದರುತ್ತಿದೆ, ಹೀಗೆ ನೆನಪುಗಳನ್ನು ಹೇಳೋದಿಲ್ವಾ?
  • ಮಕ್ಕಳು ಮನೆಗೆ ಸೀಮಿತ ಆದ್ರೆ ಹೇಗೆ? ಮನೆಯೊಳಗೆ ಇರೋದು, ನಾಲ್ಕು ಜನರ ಜೊತೆ ಮಾತ್ರ ಬೆರೆಯೋದು ಎಷ್ಟು ಸರಿ ಹೇಳಿ..
  • ನೀವು ಮಕ್ಕಳನ್ನು ಬಿಟ್ಟು ಬಂದ್ರೆ ಒತ್ತಡ ಇದ್ದಿದ್ದೆ, ಮಕ್ಕಳೇ ನಿಮ್ಮ ಜೊತೆ ಇದ್ರೆ ಅವರ ನಗು, ನಿಮ್ಮ ನಗು ಅಲ್ವಾ?
  • ಮಕ್ಕಳ ಮೆದುಳಿನ ಬೆಳವಣಿಗೆಗೆ ಇದು ಸಹಕಾರಿ, ಹೊಸ ವಾಸನೆ, ಹೊಸ ಬೆಳಕು, ಹೊಸ ವಾತಾವರಣ, ಹೊಸ ಶಬ್ದ ಎಲ್ಲವೂ ಮಕ್ಕಳಿಗೆ ಮುಖ್ಯ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!