LIFESTYLE | ಪಾತ್ರೆ ತೊಳಿಯೋ ಮಶೀನ್ ಖರೀದಿ ಮಾಡ್ಬೇಕಾ? ಬೇಡ್ವಾ?

ಹಿಂದೆಲ್ಲಾ ಪಾತ್ರೆ ತೊಳೆಯೋದೆಂದರೆ ದೊಡ್ಡ ಕೆಲಸವೇ ಸರಿ, ಆದ್ರೆ ಈಗ ಡಿಶ್‌ವಾಶರ್‌ ಮಾರುಕಟ್ಟೆಯಲ್ಲಿ ಇರೋದ್ರಿಂದ ಅದನ್ನು ಖರೀದಿ ಮಾಡಿದರೆ ಆಯ್ತು ಎನಿಸುತ್ತದೆ. ಈ ಹಿಂದೆ ಬಟ್ಟೆ ಒಗೆಯೋದಕ್ಕೆ ಮಶೀನ್‌ ಎಂದರೆ ಎಲ್ಲರ ಮನೆಯಲ್ಲು ಇರುತ್ತಿರಲಿಲ್ಲ. ಆದ್ರೆ ಈಗ ನೋಡಿ ಪ್ರತೀ ಮನೆಯಲ್ಲೂ ವಾಶಿಂಗ್‌ ಮಶೀನ್‌ ಇರುತ್ತದೆ.

ಅದೇ ರೀತಿ ಕೆಲ ವರ್ಷಗಳ ನಂತರ ಪ್ರತೀ ಮನೆಯಲ್ಲೂ ಡಿಶ್‌ವಾಶರ್‌ ಕೂಡ ಇರುತ್ತದೆ. ಇದರಿಂದ ಏನೆಲ್ಲಾ ಉಪಯೋಗ ನೋಡಿ..

ಗಂಟೆಗಟ್ಟಲೆ ನಿಂತು ಪಾತ್ರೆ ತೊಳೆಯೋದು ತಪ್ಪುತ್ತದೆ.

ನೀವು ಪಾತ್ರೆ ತೊಳೆಯುವ ಅರ್ಧ ಸಮಯದಲ್ಲಿ ಮಶೀನ್‌ ಪಾತ್ರೆ ತೊಳೆದುಬಿಡುತ್ತದೆ.

ಕೈಯಲ್ಲಿ ತೊಳೆದಾಗ ಬಳಕೆಯಾಗುವ ನೀರಿಗಿಂತ ಡಿಶ್‌ವಾಶರ್‌ನಲ್ಲಿ ಕಡಿಮೆ ನೀರು ಬಳಕೆಯಾಗುತ್ತದೆ.

ಕೈಯಲ್ಲಿ ತೊಳೆದಾಗ ಪಾತ್ರೆ ಕ್ಲೀನ್‌ ಆಗುತ್ತದೆ. ಆದ್ರೆ ಮಶೀನ್‌ನಲ್ಲಿ ಕೊಳೆ ಸ್ವಲ್ಪವೂ ಇರೋದಿಲ್ಲ.

ಪಾತ್ರೆಗಳು ಸ್ಟೀಮ್‌ ಆಗಿ ಡ್ರೈ ಆಗಿ ಬರೋದ್ರಿಂದ ಹೈಜೆನಿಕ್‌ ಆಗಿ ಇರುತ್ತದೆ.

ಅಡುಗೆ ಮನೆಯಲ್ಲಿ ಪಾತ್ರೆಗಳು ರಾಶಿ ಬಿದ್ದು ಜಿರಳೆ ಸಮಸ್ಯೆ ಬರೋದಿಲ್ಲ. ಮನೆ ಕ್ಲೀನ್‌ ಆಗಿ ಕಾಣಿಸುತ್ತದೆ.

ನಿಮ್ಮ ಕೈ ಕೋಮಲವಾಗಿರುತ್ತದೆ. ಹಾರ್ಡ್‌ ಆದ ಸೋಪಿನಿಂದ ಕೈಹಾಳಾಗೋದು ತಪ್ಪುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!