ʼನಾನು ಸಿಇಒ ಸ್ಥಾನದಿಂದ ಕೆಳಗಿಳಿಯಬೇಕಾ ?ʼ – ಟ್ವೀಟರ್‌ ನಲ್ಲಿಯೇ ಸಮೀಕ್ಷೆ ಪ್ರಾರಂಭಿಸಿದ ಮಸ್ಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಎರಡು ತಿಂಗಳ ಹಿಂದಷ್ಟೇ ಸಾಮಾಜಿಕ ಮಾಧ್ಯಮ ವೇದಿಕೆ ಟ್ವೀಟರ್‌ ಅನ್ನು 44 ಬಿಲಿಯನ್‌ ಡಾಲರುಗಳಿಗೆ ಸ್ವಾಧೀನ ಪಡಿಸಿಕೊಂಡ ಎಲಾನ್‌ ಮಸ್ಕ್‌ ಅವರ ಇದೀಗ ತಾವು ಟ್ವಿಟರ್‌ ಸಿಇಒ ಸ್ಥಾನದಿಂದ ಕೆಳಗಿಳಿಯಬೇಕಾ? ಎಂದು ಪ್ರಶ್ನಿಸಿ ಟ್ವೀಟರ್‌ ನಲ್ಲಿಯೇ ಸಮೀಕ್ಷೆ ಪ್ರಾರಂಭಿಸಿದ್ದಾರೆ. ಈ ಸಮೀಕ್ಷೆಯ ಫಲಿತಾಂಶ ಏನೇ ಬಂದರೂ ಅದಕ್ಕೆ ಬದ್ಧವಾಗಿರುವುದಾಗಿ ಅವರು ಹೇಳಿದ್ದಾರೆ.

ಮಸ್ಕ್‌ ಒಡೆತನಕ್ಕೆ ಬಂದ ಮೇಲೆ ಟ್ವೀಟರ್‌ನಲ್ಲಿ ಆಮೂಲಾಗ್ರ ಬದಲಾವಣೆಗಳು ನಡೆದಿವೆ. ಅನೇಕ ಉದ್ಯೋಗಿಗಳನ್ನು ಮುಲಾಜಿಲ್ಲದೇ ಮನೆಗೆ ಕಳುಹಿಸಲಾಗಿದೆ. ಟ್ವೀಟರ್‌ ನ ಮೂಲ ಉದ್ದೇಶವನ್ನು ಮರುಸ್ಥಾಪಿಸುತ್ತೇನೆ ಎಂದಿದ್ದ ಮಸ್ಕ್‌ ಇದೀಗ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕಾ ಎಂದು ಪ್ರಶ್ನಿಸಿರುವುದು ಹಲವು ಗೊಂದಲಕ್ಕೆ ಕಾರಣವಾಗಿದೆ.

ಭಾನುವಾರವಷ್ಟೇ ಟ್ವಿಟರ್‌ ಹೊಸ ನಿಯಮ ಜಾರಿಗೆ ತಂದಿತ್ತು. ಫೇಸ್ಬುಕ್‌ ಇನ್ಸ್ಟಾಗ್ರಾಂ ಸೇರಿದಂತೆ ಇತರೇ ಸಾಮಾಜಿಕ ಮಾಧ್ಯಮಗಳನ್ನು ಪ್ರಚಾರ ಮಾಡುವ, ಆ ಉದ್ದೇಶಕ್ಕೆಂದೇ ತೆರೆಯಲ್ಪಟ್ಟ ಖಾತೆಗಳನ್ನು ಬ್ಯಾನ್‌ ಮಾಡುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಮಸ್ಕ್‌ ಅವರ ಈ ಸಮೀಕ್ಷೆ ಬಂದಿದೆ.

ಈ ಹಿಂದೆ ಮಸ್ಕ್ ತಾವು ಮುಂದಿನ ದಿನಗಳಲ್ಲಿ ನಿಧಾನವಾಗಿ ಟ್ವೀಟರ್‌ ನೊಂದಿಗಿನ ಸಮಯವನ್ನು ಕಡಿಮೆ ಮಾಡುವುದಾಗಿ ಹಾಗು ಟ್ವೀಟರ್‌ ಗೆ ಹೊಸ ನಾಯಕನನ್ನು ನೇಮಿಸುವುದಾಗಿ ಕಳೆದ ತಿಂಗಳು ಡೆಲವೇರ್ ನ್ಯಾಯಾಲಯದಲ್ಲಿ ಹೇಳಿದ್ದರು ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!