ರನ್ನರ್‌ ಅಪ್‌ ಫ್ರಾನ್ಸ್‌ ಗೆ ಸಿಕ್ತು 248 ಕೋಟಿ..! ಹಾಗಿದ್ರೆ ವಿಶ್ವವಿಜೇತ ಅರ್ಜೆಂಟಿನಾಕ್ಕೆಷ್ಟು!? ಉಳಿದ ತಂಡಗಳಿಗೆಷ್ಟು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕತಾರ್‌ ನಲ್ಲಿ ಸಾಗಿದ ಫಿಫಾ ವಿಶ್ವಕಪ್‌ ಗೆ ಅದ್ಧೂರಿ ತೆರೆ ಬಿದ್ದಿದೆ. ಫುಟ್ಬಾಲ್‌ ದಂತಕತೆ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಬರೋಬ್ಬರಿ 36 ವರ್ಷಗಳ ಬಳಿಕ ವಿಶ್ವಚಾಂಪಿಯನ್‌ ತಂಡವಾಗಿ ಹೊರಹೊಮ್ಮಿದೆ. ಮೊದಲ 90 ನಿಮಿಷದ ಲ್ಲಿ ತಲಾ 2 ಗೋಲುಗಳಿಸಿ ಸಮಬಲ ಸಾಧಿಸಿದ ತಂಡಗಳು ಹೆಚ್ಚುವರಿ ಅವಧಿಯಲ್ಲೂ 3-3 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಇದರಿಂದ ಫಲಿತಾಂಶ ನಿರ್ಧರಿಸಲು ಫೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ಫೆನಾಲ್ಟಿ ಅವಕಾಶಗಳನ್ನು ಬಂಗಾರವಾಗಿ ಪರಿವರ್ತಿಸಿದ ಅರ್ಜೆಂಟೀನಾ ಆಟಗಾರರು ವಿಶ್ವಕಪ್‌ ಎತ್ತಿಹಿಡಿದು ಸಂಭ್ರಮಿಸಿದರು.

ಈ ವಿಶ್ವಕಪ್‌ ನಲ್ಲಿ ತಂಡಗಳು ಪಡೆದ ಬಹುಮಾನದ ಮೊತ್ತವನ್ನು ತಿಳಿದರೆ ಅಭಿಮಾನಿಗಳು ಹುಬ್ಬೇರಿಸುವುದು ಗ್ಯಾರೆಂಟಿ.
ಟೀರ್ನಿಯ ಚಾಂಪಿಯನ್‌ ಆಗಿ ಹೊರಹೊಮ್ಮಿದ ಅರ್ಜೆಂಟೀನಾ ಬರೋಬ್ಬರಿ 344 ಕೋಟಿ ರೂ. ಗೆದ್ದಿದೆ. ಫೈನಲಿಸ್ಟ್‌ ಹಾಗೂ ರನ್ನರ್ ಅಪ್ ಫ್ರಾನ್ಸ್ 248 ಕೋಟಿ ರೂ. ಜೇಬಿಗಿಳಿಸಿದೆ. ಮೊರಾಕ್ಕೋ ವಿರುದ್ಧ ಗೆದ್ದು ಮೂರನೇ ಸ್ಥಾನ ಪಡೆದ ಕ್ರೊಯೇಷಿಯಾ ರೂ 223 ಕೋಟಿ ಗಳಿಸಿದೆ. ಮೊರಾಕೊ (ನಾಲ್ಕನೇ ಸ್ಥಾನ): 206 ಕೋಟಿ ರೂ. ಪಡೆದುಕೊಂಡಿದೆ. ಇನ್ನು 5-8ನೇ ಸ್ಥಾನಗಳನ್ನು ಪಡೆದ ನೆದರ್ಲ್ಯಾಂಡ್ಸ್, ಬ್ರೆಜಿಲ್, ಪೋರ್ಚುಗಲ್ ಮತ್ತು ಇಂಗ್ಲೆಂಡ್ ತಲಾ ರೂ 140 ಕೋಟಿ ಪಡೆದಿವೆ.
9-16ನೇ ಸ್ಥಾನ ಪಡೆದ ಯುನೈಟೆಡ್ ಸ್ಟೇಟ್ಸ್ (ಅಮೆರಿಕ), ಆಸ್ಟ್ರೇಲಿಯಾ, ಪೋಲೆಂಡ್, ಸೆನೆಗಲ್, ಜಪಾನ್, ದಕ್ಷಿಣ ಕೊರಿಯಾ, ಸ್ಪೇನ್ ಮತ್ತು ಸ್ವಿಟ್ಜರ್ಲೆಂಡ್ ತಲಾ ರೂ. 114 ಕೋಟಿ ಪಡೆದುಕೊಂಡಿವೆ.
ಗುಂಪು ಹಂತದಲ್ಲಿ ಕಾಣಿಸಿಕೊಂಡಿದ್ದ ತಂಡಗಳಾದ ಈಕ್ವೆಡಾರ್, ಕತಾರ್, ಇರಾನ್, ವೇಲ್ಸ್, ಮೆಕ್ಸಿಕೊ, ಸೌದಿ ಅರೇಬಿಯಾ, ಟುನೀಶಿಯಾ, ಡೆನ್ಮಾರ್ಕ್, ಜರ್ಮನಿ, ಕೋಸ್ಟರಿಕಾ, ಬೆಲ್ಜಿಯಂ, ಕೆನಡಾ, ಕ್ಯಾಮರೂನ್, ಸರ್ಬಿಯಾ, ಉರುಗ್ವೆ ಮತ್ತು ಘಾನಾ ತಲಾ 74 ಕೋಟಿ ರೂ. ಜೇಬಿಗಿಸಿಕೊಂಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!