ನವವಧು-ವರರು ಸಪ್ತಪದಿ ತುಳಿಯುವುದು ಯಾಕೆ ಗೊತ್ತಾ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮದುವೆ ಸ್ವರ್ಗದಲ್ಲಿ ನಿಶ್ಚಯ ಆಗುತ್ತೆ ಅಂತಾರೆ ಹಿರಿಯರು. ಪ್ರತಿಯೊಬ್ಬರು ಜೀವನದಲ್ಲೂ ಒಮ್ಮೆ ಮಾತ್ರ ಬರುವ ಈ ಸಂತಸದ ಖುಷಿಯಲ್ಲಿ ಎರಡು ಮನಸ್ಸುಗಳು, ಎರಡು ಕುಟುಂಬಗಳು ಜೀವಮಾನವಿಡೀ ಒಂದಾಗುವ ಮಹತ್ವದ ಘಟನೆ. ಈ ಸಂದರ್ಭದಲ್ಲಿ ನಡೆಯುವ ಪ್ರತಿ ಆಚರಣೆಯ ಹಿಂದೆ ಅನೇಕ ಅರ್ಥಗಳು ಮತ್ತು ವಿರೋಧ ಭಾಸಗಳಿವೆ, ಈ ಆಚರಣೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಬಂಧುಮಿತ್ರರ ಸಮ್ಮುಖದಲ್ಲಿ ವೇದಘೋಷಗಳ ನಡುವೆ ವರನು ವಧುವಿನ ಕಿರುಬೆರಳನ್ನು ಹಿಡಿದು ಹೋಮಕುಂಡದ ಸುತ್ತ ಏಳು ಹೆಜ್ಜೆ ಹಾಕುತ್ತಾನೆ. ಇದನ್ನು ಸಪ್ತಪದಿ ಎಂದು ಕರೆಯಲಾಗುತ್ತದೆ. ಸಪ್ತಪದಿಯ ಮುಖ್ಯ ಉದ್ದೇಶ ಪತಿ-ಪತ್ನಿಯರು ಪರಸ್ಪರ ಗೌರವ, ಅನ್ಯೋನ್ಯತೆ ಮತ್ತು ಆದರ್ಶದಿಂದ ಬಾಳುವ ಸಂಕೇತವಾಗಿದೆ.

ಒಂದೊಂದು ಹೆಜ್ಜೆ ಒಂದೊಂದು ಸಂಕೇತ. ಸಪ್ತಪದಿಯ ಹಾಗೆ ಹೆಜ್ಜೆ ಮುಂದೆ ಹೋಗುತ್ತಿರಬೇಕೇ ಹೊರತು ಹಿಂದೆ ಸರಿಯಬಾರದು. ಒಂದೊಂದೇ ಹಂತವನ್ನು ದಾಟಿ ಮನುಷ್ಯ ಜೀವನದಲ್ಲಿ ಅಭಿವೃದ್ದಿ ಹೊಂದಬೇಕು ಎಂಬುದು ಆಶಯ. ಮೊದಲ ಹೆಜ್ಜೆ ಅನ್ನದ ಬೆಳವಣಿಗೆ, ಎರಡನೆ ಹೆಜ್ಜೆ ಶಕ್ತಿಯ ಬೆಳವಣಿಗೆ, ಮೂರನೇ ಹೆಜ್ಜೆ ಸಂಪತ್ತಿನ ಬೆಳವಣಿಗೆ, ನಾಲ್ಕನೇ ಹೆಜ್ಜೆ ಸಂತೋಷದ ಬೆಳವಣಿಗೆ, ಐದನೇ ಹೆಜ್ಜೆ ಒಗ್ಗಟ್ಟು, ಆರನೇ ಹೆಜ್ಜೆ ವೈವಾಹಿಕ ಜೀವನ, ಮತ್ತು ಏಳನೇ ಹೆಜ್ಜೆ ಸಂತಾನ. ಮನುಷ್ಯನ ಜೀವನದಲ್ಲಿ ಎಲ್ಲವೂ ಮುಖ್ಯವಾದ ಅಂಶಗಳಿವು. ಎಲ್ಲವೂ ಸಕಾಲದಲ್ಲಿ ನೆರವೇರಲಿ. ಬಂಧು-ಬಾಂಧವರ ಹರಕೆಯಿಂದ ಈಡೇರಲಿ ಎಂಬುದು ಇದರ ಉದ್ದೇಶ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!