ಡಿಕೆಶಿ ತ್ಯಾಗ, ಪರಿಶ್ರಮಕ್ಕೆ ಪ್ರತಿಫಲ ಬೇಕೇ ಬೇಕು: ಡಿ.ಕೆ. ಸುರೇಶ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭರ್ಜರಿ ಗೆಲುವು ಸಾಧಿಸಿದರೂ ಕಾಂಗ್ರೆಸ್‌ಗೆ ಸಿಎಂ ಯಾರು ಎನ್ನುವ ತಲೆನೋವು ತಪ್ಪಿಲ್ಲ.
ಘಟಾನುಘಟಿ ನಾಯಕರುಗಳಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಮಧ್ಯೆ ಸಿಎಂ ಯಾರಾಗ್ತಾರೆ ಅನ್ನೋ ಕುತೂಹಲ ರಾಜ್ಯದಲ್ಲಿ ಮನೆ ಮಾಡಿದೆ.

ಈ ಮಧ್ಯೆ ಇಬ್ಬರು ನಾಯಕರೂ ದೆಹಲಿಗೆ ತೆರಳಿದ್ದು, ಇಂದು ಬಹುತೇಕ ಸಿಎಂ ಯಾರು ಎನ್ನುವ ಘೋಷಣೆ ಮಾಡಲಾಗುತ್ತದೆ. ಈ ಬಗ್ಗೆ ಡಿಕೆಶಿ ಸಹೋದರ ಡಿ.ಕೆ. ಸುರೇಶ್ ಮಾತನಾಡಿದ್ದು, ಡಿಕೆಶಿ ಅವರು ಪಕ್ಷಕ್ಕಾಗಿ ಸದಾ ಕೆಲಸ ಮಾಡಿದ್ದಾರೆ. ಊಟ, ತಿಂಡಿ, ನಿದ್ದೆ, ಕುಟುಂಬ ಯಾವುದಕ್ಕೂ ಸಮಯ ನೀಡದೇ ಜನಸೇವೆಯಲ್ಲೇ ಕಾಲಕಳೆದಿದ್ದಾರೆ. ಇಷ್ಟೆಲ್ಲಾ ಕಷ್ಟಪಟ್ಟವರಿಗೆ ಫಲ ದೊರಕಲೇಬೇಕು ಎಂದು ಡಿ.ಕೆ. ಸುರೇಶ್ ಹೇಳಿದ್ದಾರೆ.

ಸಾಕಷ್ಟು ಪ್ರಯತ್ನಪಟ್ಟು ಕಾಂಗ್ರೆಸ್ ಗೆಲುವಿಗೆ ಡಿಕೆಶಿ ಕಾರಣರಾಗಿದ್ದಾರೆ. ಬರೋಬ್ಬರಿ 15 ಸ್ಥಾನಗಳನ್ನು ಪಕ್ಷಕ್ಕೆ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಹೀಗಾಗಿ ಅವರ ಶ್ರಮಕ್ಕೆ ಪ್ರತಿಫಲ ದೊರೆಯುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!