BIG BOSS | ಸಿನಿಮಾಗೆ ನ್ಯಾಯ ಕೊಡ್ಬೇಕಾ? ಇಲ್ಲ ಬಿಗ್‌ಬಾಸ್‌ಗಾ? ಹೋಸ್ಟಿಂಗ್‌ ಬಗ್ಗೆ ಏನ್‌ ಹೇಳಿದ್ರು ನಟ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ಸುದೀಪ ಇಂದು ಬೆಳಗ್ಗೆ ಸುದ್ದಿಗೋಷ್ಠಿ ಕರೆದಿದ್ದು, ಬಿಗ್‌ಬಾಸ್‌ ಹೋಸ್ಟಿಂಗ್‌ ಬಗ್ಗೆ ಮಾತನಾಡಿದ್ದಾರೆ. ಬಿಗ್ ಬಾಸ್‌ನ 10 ಸೀಸನ್‌ಗಳನ್ನು ನಾನು ಡೆಡಿಕೇಟ್ ಮಾಡಿದ್ದೀನಿ. ಕಳೆದ 10 ಸೀಸನ್‌ಗಳನ್ನು ನಾನು ನಡೆಸಿಕೊಂಡು ಬಂದಿದ್ದೀನಿ. ನಾನು ಬಿಗ್ ಬಾಸ್ ನಡೆಸಿಕೊಡ್ತೀನಿ ಅಂತಾ ಎಲ್ಲರಿಗೂ ಗೊತ್ತಿದೆ. ಆದರೆ ನಾನು ಹೇಗೆ ನಡೆಸಿಕೊಡುತ್ತಿದ್ದೆ ಅಂತಾ ಯಾರಿಗಾದರೂ ಗೊತ್ತಿದ್ಯಾ? ಬಿಗ್ ಬಾಸ್‌ಗಾಗಿ ನಾನು ಎಲ್ಲಿದ್ದರೂ ಬರಬೇಕಾಗುತ್ತದೆ. ಬಿಗ್ ಬಾಸ್ ನಡೆಸಬೇಕಾದರೆ ಅದರ ಹಿಂದಿನ ಸ್ಥಿತಿ ಹೇಗಿರುತ್ತದೆ ಅಂತಾ ನನಗೆ ಗೊತ್ತಿದೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಸಿನಿಮಾಗೆ ನ್ಯಾಯ ಕೊಡಬೇಕಾ? ಅಥವಾ ಬಿಗ್ ಬಾಸ್ ಶೋಗೆ ನ್ಯಾಯ ಕೊಡಬೇಕಾ? ಎಂದು ಪ್ರಶ್ನಿಸಿದರು. ಸುದೀಪ್ ಅವರು ಈ ಮಾತನ್ನು ಆಡಿದ ಬೆನ್ನಲ್ಲೇ ಈ ಬಾರಿಯ ಶೋನದಲ್ಲಿ ನಿರೂಪಣೆ ಮಾಡ್ತಾರೋ ಇಲ್ವೋ ಪ್ರಶ್ನೆ ಎದುರಾಗಿದೆ. ಮಾಧ್ಯಮಗೋಷ್ಠಿಯಲ್ಲಿ ನಾನು ಶೋ ನಡೆಸಿಕೊಡುತ್ತೇನೆ ಅಥವಾ ನಡೆಸಿಕೊಡುವುದಿಲ್ಲ ಎನ್ನುವುದರ ಬಗ್ಗೆ ಯಾವುದೇ ಸ್ಪಷ್ಟವಾದ ಉತ್ತರ ನೀಡಿಲ್ಲ. ವಾಹಿನಿ ಸಹ ಈ ವಿಚಾರದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಹೀಗಾಗಿ ಬಿಗ್ ಬಾಸ್ ಆರಂಭವಾಗುವವರೆಗೂ ಕುತೂಹಲ ಮುಂದುವರಿಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!