ಹೊಸದಿಗಂತ ಡಿಜಿಟಲ್ ಡೆಸ್ಕ್:
ದರ್ಶನ್ ಬಂಧನದ ಬಗ್ಗೆ ಹಲವರು ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಮತ್ತು ದರ್ಶನ್ ಈ ಮೊದಲು ಸ್ನೇಹಿತರು. ಈಗ ಅವರ ಸ್ನೇಹ ಹಾಳಾಗಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. “ನಾನು ಏನು ಹೇಳಬೇಕೋ ಅದನ್ನು ಮಾತನಾಡಿ ಆಗಿದೆ” ಅವರಿಗೆ ಅಭಿಮಾನಿಗಳಿದ್ದಾರೆ. ಕುಟುಂಬದ ಸದಸ್ಯರಿದ್ದಾರೆ. ನಾವು ಮಾತನಾಡುತ್ತಿರುವುದರಿಂದ ಅವರಿಗೆ ಬೇಸರವಾಗುತ್ತದೆ.
ಇನ್ನೊಂದು ಕುಟುಂಬವಿದೆ. ಅವರಿಗೂ ಸಹ ನೋವಾಗಬಹುದು. ಸರ್ಕಾರ ಮತ್ತು ಕಾನೂನು ಇದೆ. ಅದನ್ನ ನಂಬಬೇಕು. ಎಲ್ಲವನ್ನೂ ನಂಬಬೇಕು ಎಂದು ಸುದೀಪ್ ಹೇಳಿದ್ದಾರೆ.