February 27, 2026
Friday, February 27, 2026
spot_img

TRAVEL | ವಿಶ್ವದ ಅತ್ಯಂತ ಹಳೆಯ ನಗರ ವಾರಾಣಸಿಗೆ ಒಮ್ಮೆ ಹೋಗಿ ಬರೋಣ್ವ?

ಜೀವನದಲ್ಲಿ ಒಮ್ಮೆಯಾದ್ರೂ ಗಂಗೆಗೆ ಆರತಿ ಬೆಳಗೋದನ್ನು ನೋಡಿದ್ದೀರಾ? ಬೆಳ್ಳಂಬೆಳಗ್ಗೆ ಗಂಗೆಯ ಮುಂದೆ ನೂರಾರು ಪಂಡಿತರು ನಿಂತು ದೊಡ್ಡ ಆರತಿ ಬೆಳಗುತ್ತಾರೆ. ಇದನ್ನು ಕಣ್ತುಂಬಿಕೊಳ್ಳೋದನ್ನು ಎಷ್ಟು ಸಮಯವಿದ್ರೂ ಸಾಲದು. ಕಾಶಿಯ ಗಾಳಿಯಲ್ಲಿ ಭಕ್ತಿಯಿದೆ, ನಿಷ್ಠೆಯಿದೆ, ಜೀವನದ ಪಾಠವಿದೆ.

ಉತ್ತರ ಪ್ರದೇಶದ ಗಂಗಾ ನದಿಯ ದಂಡೆಯ ಮೇಲಿರುವ ವಿಶ್ವದ ಅತ್ಯಂತ ಹಳೆಯ ಹಾಗೂ ಪವಿತ್ರವಾದ ನಗರಿ ವಾರಾಣಸಿ. ಈ ನಗರಕ್ಕೆ ಹೋಗಿ ಬಂದವರಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು ಕಾಣಿಸುತ್ತವೆ. ಜೀವನದಲ್ಲಿ ಮತ್ತೆ ನೆಮ್ಮದಿ ನೆಲೆಸಿರುತ್ತದೆ.

ಎಲ್ಲಿಗೆ ಹೋಗಬೇಕು?

ಗಂಗಾ ಘಾಟ್‌, ಇದು ವಾರಾಣಸಿಯ ಹೃದಯ ಭಾಗ. ಇಲ್ಲಿ ದಶಶ್ವಮೇಧ ಘಾಟ್‌, ಅಸ್ಸಿ ಘಾಟ್‌ ಹಾಗೂ ಮಣಿಕರ್ಣಿಕಾ ಘಾಟ್‌ ಇದೆ.

ಕಾಶಿ ವಿಶ್ವನಾಥ ದೇಗುಲವನ್ನು ತಪ್ಪದೇ ನೋಡಿ. ವಿಶ್ವನಾಥನ ಕೃಪೆಗೆ ಪಾತ್ರರಾಗಿ.

ವಾರಾಣಸಿಯಿಂದ ಹತ್ತು ಕಿಮೀ ದೂರದಲ್ಲಿ ಸರ್ನಾತ್‌ಗೆ ಭೇಟಿ ಕೊಡಿ. ಇಲ್ಲಿ ಬುದ್ಧ ತನ್ನ ಮೊದಲ ಅನುಯಾಯಿಗೆ ಬೋಧಿಸಿದ್ದರು ಎನ್ನುವ ನಂಬಿಕೆ ಇದೆ.

ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಲ್ಲಿ ಬಿರ್ಲಾ ದೇವಸ್ಥಾನ ಹಾಗೂ ಭಾರತ್‌ ಕಲಾ ಭವನ ಮ್ಯೂಸಿಯಂ ಇದೆ.

ಸಂಕಟ್‌ ಮೋಚನ್‌ ಹನುಮಾನ್‌ ದೇಗುಲ, ದುರ್ಗಾ ಮಂದಿರ, ಭಾರತ್‌ ಮಾತಾ ಮಂದಿರ ಅದ್ಭುತ.

ಬನಾರಸಿ ಸಿಲ್ಕ್‌ ಸೀರೆಗಳು ಹಾಗೂ ಲೋಕಲ್‌ ಹ್ಯಾಂಡಿಕ್ರಾಫ್ಟ್‌ಗಳಿಗಾಗಿ ಮಾರ್ಕೆಟ್‌ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !