ಉಗುರುಬಣ್ಣ ನಿಮ್ಮ ಕಾಲುಗಳು ಅಥವಾ ಕೈಯನ್ನು ಸುಂದರವಾಗಿಸಬಹುದು. ಆದರೆ ಅದರಿಂದ ಆರೋಗ್ಯಕ್ಕೆ ಸಮಸ್ಯೆಯೂ ಇದೆ. ನೇಲ್ ಪೇಂಟ್ ಹಚ್ಚೋದು ಬೇಡ ಎನ್ನೋದಿಲ್ಲ. ಆದರೆ ಆಗಾಗ ಅದನ್ನು ರಿಮೂವ್ ಮಾಡಿ ಉಗುರುಗಳಿಗೆ ಉಸಿರಾಡಲು ಬಿಡಿ..
ಯಾವಾಗಲೂ ಉಗುರುಬಣ್ಣ ಹಚ್ಚಿದ್ದರೆ ಉಗುರು ಡ್ರೈ ಆಗುತ್ತದೆ. ಒಡೆದ ಉಗುರಿನಿಂದ ಬ್ಯಾಕ್ಟೀರಿಯಾ ದೇಹಕ್ಕೆ ಬರುತ್ತದೆ.
ನೇಲ್ ಪೇಂಟ್ ಬೇಗ ಒಣಗಲಿ ಎಂದು ಬಳಸುವ ಯುವಿ ರೇಸ್ ಸದಾ ಉಪಯೋಗಿಸಿದ್ರೆ ಕ್ಯಾನ್ಸರ್ ಸಾಧ್ಯತೆ ಹೆಚ್ಚು
ನೇಲ್ ಪೊಲಿಷ್‌ನಲ್ಲಿ ಇರುವ ಹಾನಿಕಾರಕ ಕೆಮಿಕಲ್‌ಗಳು ಉಗುರುಗಳ ಅಂದವನ್ನು ಹಾಳುಮಾಡುತ್ತವೆ.
ಒಂದು ವಾರ ಬಣ್ಣ ಹಚ್ಚಿದ್ದರೆ ಅದನ್ನು ರಿಮೂವ್ ಮಾಡಿ ಒಂದು ವಾರ ಉಗುರನ್ನು ಹಾಗೇ ಬಿಡಿ. ಇದೇ ರೀತಿ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ