HEALTH | ಸೇಬನ್ನು ಸಿಪ್ಪೆ ಸಮೇತ ಅಥವಾ ತೆಗೆದು ತಿನ್ಬೇಕಾ? ಆರೋಗ್ಯಕ್ಕೆ ಇದೇ ಒಳ್ಳೆಯದು

ಸೇಬುಗಳನ್ನು ಸಿಪ್ಪೆ ಸಮೇತ ತಿನ್ನಬೇಕು ಅನ್ನೋದು ಏಕೆ? ಅಷ್ಟಕ್ಕೂ ಸೇಬನ್ನು ಸಿಪ್ಪೆ ಸಮೇತ ತಿನ್ನಬೇಕಾ ಅಥವಾ ಸಿಪ್ಪೆ ತೆಗೆದು ತಿನ್ನಬೇಕಾ? ಈ ವಿಚಾರವಾಗಿ ಅನೇಕ ಮಂದಿಯಲ್ಲಿ ಇಂದಿಗೂ ಗೊಂದಲವಿದೆ. ಏಕೆಂದರೆ ಸೇಬು ಆರೋಗ್ಯ ಬಹಳ ಒಳ್ಳೆಯದು. ಹೀಗಾಗಿ ಈ ಹಣ್ಣನ್ನು ಹೆಚ್ಚಾಗಿ ಜನ ತಿನ್ನುತ್ತಾರೆ. ಆದರೆ ಸೇಬಿನ ಹಣ್ಣಿನ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರ ಇನ್ನೂ ಮತ್ತಷ್ಟಿದೆ. ಹಾಗಾದ್ರೆ ಅವು ಯಾವುವು ಎಂದು ನೋಡೋಣ ಬನ್ನಿ.

ನ್ಯಾಚುರಲ್ ಆಗಿ ಸೇಬುಗಳು ಫೈಬರ್, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇವು ಆರೋಗ್ಯಕ್ಕೆ ಸಹ ತುಂಬಾ ಪ್ರಯೋಜನಕಾರಿ ಆಗಿದೆ. ವಾಸ್ತವವಾಗಿ, ಅನೇಕ ಮಂದಿ ಸೇಬನ್ನು ಸಿಪ್ಪೆ ಸಮೇತ ತಿನ್ನಲು ಬಯಸುತ್ತಾರೆ. ಏಕೆಂದರೆ ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ಭಾವಿಸಲಾಗಿದೆ. ಆದರೆ ಹೀಗೆ ತಿನ್ನುವುದು ನಿಜಕ್ಕೂ ಆರೋಗ್ಯಕರವೇ? ಅನೇಕರು ಹೇಳುವ ಪ್ರಕಾರ, ಸಿಪ್ಪೆ ಸಮೇತವೇ ಸೇಬುಗಳನ್ನು ತಿನ್ನಬೇಕು ಎಂಬುವುದು ಉತ್ತಮ ಉಪಾಯವಲ್ಲ.

ಸಿಪ್ಪೆ ಸುಲಿಯದೇ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವಾಗ ಕಾಳಜಿ ವಹಿಸುವುದು ಬಹಳ ಮುಖ್ಯ. ಏಕೆಂದರೆ ಇದರಲ್ಲಿ ಕೀಟನಾಶಕಗಳಿರುವ ಸಾಧ್ಯತೆ ಹೆಚ್ಚು. ಹಾಗಾಗಿ ಸೇಬುಗಳನ್ನು ತೊಳೆದು ತಿನ್ನುವುದರಿಂದ ಈ ರಾಸಾಯನಿಕಗಳನ್ನು ನಿಯಂತ್ರಿಸಬಹುದು. ಆದರೆ ಇವುಗಳನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಾಗುವುದಿಲ್ಲ. ಹಣ್ಣಿನ ಸಿಪ್ಪೆಯಲ್ಲಿ ಕೀಟನಾಶಕಗಳ ಉಳಿಕೆಗಳು ಉಳಿಯುವ ಸಾಧ್ಯತೆ ಹೆಚ್ಚು. ಕೀಟನಾಶಕಗಳು ನಿಮ್ಮೊಳಗೆ ಸೇರಿಕೊಳ್ಳಬಾರದು ಎಂಬುವುದಾದರೆ ಈ ರಾಸಾಯನಿಕಗಳ ಸೇವನೆಯನ್ನು ತಪ್ಪಿಸಲು ನಿಮ್ಮ ಸೇಬುಗಳ ಸಿಪ್ಪೆ ತೆಗೆಯುವುದು ಸರಳವಾದ ಮಾರ್ಗವಾಗಿದೆ.

ಸೇಬಿನ ಸಿಪ್ಪೆಯಲ್ಲಿ ಫೈಬರ್ ಸಮೃದ್ಧವಾಗಿದ್ದರೂ, ಸೂಕ್ಷ್ಮ ಹೊಟ್ಟೆ ಅಥವಾ ಜೀರ್ಣಕಾರಿ ಸಮಸ್ಯೆಗಳಿರುವವರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಕರುಳಿನ ಆರೋಗ್ಯ ಸಮಸ್ಯೆ ಅಥವಾ ಜಠರದುರಿತದಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಸಿಪ್ಪೆ ಸುಲಿಯದೇ ಸೇಬುಗಳನ್ನು ತಿನ್ನುವುದು ಉತ್ತಮ. ಏಕೆಂದರೆ ಸಿಪ್ಪೆಯ ಕೊರತೆಯು ಹಣ್ಣಿನ ಒರಟುತನವನ್ನು ಕಡಿಮೆ ಮಾಡುತ್ತದೆ ಮತ್ತು ಹೊಟ್ಟೆಯನ್ನು ಮೃದುವಾಗಿಸುತ್ತದೆ. ಒಟ್ಟಾರೆ ಸೇಬಿನ ಸಿಪ್ಪೆ ಸುಲಿದು ತಿನ್ನುವುದರಿಂದ ಹೊಟ್ಟೆ ಉಬ್ಬುವಿಕೆ, ಅಸ್ವಸ್ಥತೆ ಅಥವಾ ಇತರ ಜೀರ್ಣಕಾರಿ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!