ಮಹಾರಾಷ್ಟ್ರದಲ್ಲಿ ಹೆಚ್ಚಿದ ಆತಂಕ: ಒಮಿಕ್ರಾನ್ ಉಪ ರೂಪಾಂತರ ‘XBB’ 18 ಕೇಸ್ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದಲ್ಲಿ ಮತ್ತೆ ಕೊರೋನಾ ಜೊತೆಗೆ ಓಮಿಕ್ರಾನ್’ನ ಹೊಸ ಉಪ-ರೂಪಾಂತರಗಳ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ 15 ದಿನಗಳಲ್ಲಿ ಒಮಿಕ್ರಾನ್‍ನ ಎಕ್ಸ್‍ಬಿಬಿ(XBB) ಉಪ-ರೂಪಾಂತರದ ಹದಿನೆಂಟು ಪ್ರಕರಣಗಳು ಪತ್ತೆಯಾಗಿವೆ.

ಈ ಕುರಿತು ಮಾಹಿತಿ ನೀಡಿದ ಮಹಾರಾಷ್ಟ್ರ ಆರೋಗ್ಯ ಇಲಾಖೆ, ಪುಣೆಯಿಂದ 13, ನಾಗ್ಪುರ ಮತ್ತು ಥಾಣೆಯಿಂದ ತಲಾ ಎರಡು ಮತ್ತು ಅಕೋಲಾ ಜಿಲ್ಲೆಯಿಂದ ಒಂದು ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರವು ಎಕ್ಸ್ಬಿಬಿ ರೂಪಾಂತರದ ಬಗ್ಗೆ ಜನರನ್ನು ಎಚ್ಚರಿಸಿದೆ ಮತ್ತು ಹಬ್ಬದ ಋತುವನ್ನು ಗಮನದಲ್ಲಿಟ್ಟುಕೊಂಡು ಕೋವಿಡ್ -19 ಪ್ರೋಟೋಕಾಲ್‍ಗಳನ್ನು ಅನುಸರಿಸಲು ಸಲಹೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!