ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ತ್ರೀ 2 ಸಿನಿಮಾದ ಸಕ್ಸಸ್ ಬಳಿಕ ಶ್ರದ್ಧಾ ಕಪೂರ್‌ಗೆಡಿಮ್ಯಾಂಡ್ ಹೆಚ್ಚಾಗಿದೆ, ಸದ್ಯ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದ ಶ್ರದ್ಧಾ ಏಕಾಏಕಿ ಸ್ತ್ರೀ ಸಕ್ಸ್‌ಸ್‌ನಿಂದ ಸೌಂಡ್ ಮಾಡಿದ್ದಾರೆ.
ಇದೀಗ ಹೃತಿಕ್ ರೋಷನ್ ಮುಂದಿನ ಸಿನಿಮಾಗೆ ಶ್ರದ್ಧಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಸಕ್ಸಸ್‌ಫುಲ್ ಸರಣಿ ‘ಕ್ರಿಶ್ 4’ಸಿನಿಮಾ ಬರುವ ಬಗ್ಗೆ ಈಗಾಗಲೇ ಅನೌನ್ಸ್ ಆಗಿದೆ. ಹೃತಿಕ್ ರೋಷನ್ ಜೊತೆ ‘ಸ್ತ್ರೀ 2’ ಚಿತ್ರದ ನಾಯಕಿ ಶ್ರದ್ಧಾ ನಟಿಸಿದರೆ ಸೂಕ್ತ ಎಂದು ಚಿತ್ರತಂಡ ನಟಿಯನ್ನು ಸಂಪರ್ಕಿಸಿದೆ. ಶ್ರದ್ಧಾ ಕೂಡ ಕಥೆ ಕೇಳಿ ಓಕೆ ಎಂದಿದ್ದಾರೆ ಎನ್ನಲಾಗಿದೆ.