Saturday, February 4, 2023

Latest Posts

ಶ್ರದ್ಧಾ ಹತ್ಯೆ ಪ್ರಕರಣ:ಇಂದು ಸಾಕೇತ್ ನ್ಯಾಯಾಲಯ ಮುಂದೆ ಅಫ್ತಾಬ್ ಹಾಜರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶ್ರದ್ಧಾ ವಾಕರ್‌ನನ್ನು ಕೊಂದ ಆರೋಪಿ ಮತ್ತು ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ಅಫ್ತಾಬ್ ಅಮೀನ್ ಪೂನಾವಾಲಾನನ್ನು ಶುಕ್ರವಾರ ಸಾಕೇತ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಆರೋಪಿ ಅಫ್ತಾಬ್‌ಗೆ ವಿಶೇಷ ಭದ್ರತೆ ಒದಗಿಸುವಂತೆ ತಿಹಾರ್ ಜೈಲು ಪ್ರಾಧಿಕಾರವು ತನ್ನ 3ನೇ ಬೆಟಾಲಿಯನ್‌ಗೆ ಸೂಚಿಸಿದ್ದು, ಆತನನ್ನು ಸಂಬಂಧಪಟ್ಟ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು.‌

ಶ್ರದ್ಧಾ ದೇಹವನ್ನು ತುಂಡರಿಸಿ, ಕತ್ತರಿಸಿದ ದೇಹದ ಭಾಗಗಳನ್ನು ದಕ್ಷಿಣ ದೆಹಲಿಯ ಛತ್ತರ್‌ಪುರದ ಕಾಡುಗಳಲ್ಲಿ ಎಸೆದು ವಿಕೃತಿ ತೋರಿದ್ದ ಅಫ್ತಾಬ್ ಪ್ರಸ್ತುತ ದೆಹಲಿ ಪೊಲೀಸರ ವಶದಲ್ಲಿದ್ದಾರೆ.

ಜೈಲು ಅಧಿಕಾರಿಗಳ ಪ್ರಕಾರ, ಅಫ್ತಾಬ್ ಚೆಸ್ ಆಟ ಆಡುತ್ತಾ ಸಮಯವನ್ನು ಕಳೆಯುತ್ತಾನೆ, ಆಗಾಗ್ಗೆ ಏಕಾಂತವಾಗಿ ಮತ್ತು ಸಾಂದರ್ಭಿಕವಾಗಿ ಇಬ್ಬರು ಸಹ ಕೈದಿಗಳೊಂದಿಗೆ ಮಾತನಾಡುತ್ತಾನೆ ಎಂಬ ಮಾಹಿತಿ ನೀಡಿದರು.

ಪ್ರಕರಣದ ತನಿಖಾಧಿಕಾರಿಯೊಬ್ಬರು ಅಫ್ತಾಬ್ ತುಂಬಾ ಬುದ್ಧಿವಂತ ಮತ್ತು ಪ್ರಕರಣದಲ್ಲಿ “ಹೊಸ ಟ್ವಿಸ್ಟ್” ಅನ್ನು ನಿರೀಕ್ಷಿಸಬಹುದು ಎಂದು ಹೇಳಿದರು.

ಮೂಲಗಳ ಪ್ರಕಾರ, ಅಫ್ತಾಬ್ ತನ್ನ ಜೈಲು ಕೋಣೆಯನ್ನು ಇನ್ನೂ ಇಬ್ಬರು ಕೈದಿಗಳೊಂದಿಗಿದ್ದು, ಆಗಾಗ್ಗೆ ಸೆಲ್‌ನಲ್ಲಿ ಚೆಸ್ ಆಟವನ್ನು ಆಡುತ್ತಾರೆ ಎಂಬ ವಿಚಾಋ ಬೆಳಕಿಗೆ ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!