ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ಮಂಪರು ಪರೀಕ್ಷೆ ಮುಕ್ತಾಯವಾಗಿದೆ.
ದೇಶವನ್ನೇ ಬೆಚ್ಚಿಬೀಳಿಸುವ ರೀತಿಯಲ್ಲಿ ತನ್ನ ಪ್ರೇಯಸಿಯನ್ನು ಕೊಂದಿದ್ದ ಅಫ್ತಾಬ್ಗೆ ಸುಮಾರು ಎರಡು ಗಂಟೆಗಳ ಕಾಲ ಮಂಪರು ಪರೀಕ್ಷೆ ಮಾಡಲಾಗಿದೆ.
ಡಾ. ನವೀನ್ ಕುಮಾರ್ ನೇತೃತ್ವದದಲ್ಲಿ ಏಳು ವೈದ್ಯರ ತಂಡ ಮಂಪರು ಪರೀಕ್ಷೆ ನಡೆಸಿದೆ. ಇದೀಗ ಪರೀಕ್ಷೆ ಮುಗಿದಿದ್ದು, ವೈದ್ಯರ ನಿಗಾದಲ್ಲಿ ಅಫ್ತಾಬ್ ಇದ್ದಾರೆ. ಇದಾದ ನಂತರ ವಾಪಾಸ್ ತಿಹಾರ್ ಜೈಲಿಗೆ ಅಫ್ತಾಬ್ನ್ನು ಕರೆದೊಯ್ಯಲಾಗುವುದು.