ಶ್ರದ್ಧಾ ವಾಕರ್‌ ತಂದೆ ವಿಕಾಸ್ ಹೃದಯಾಘಾತದಿಂದ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ಮೆಹ್ರೌಲಿಯಲ್ಲಿ ಲಿವ್‌-ಇನ್‌ ಸಂಗಾತಿಯಿಂದ ಬರ್ಬರವಾಗಿ ಹತ್ಯೆಯಾಗಿದ್ದ ಶ್ರದ್ಧಾ ವಾಕರ್‌ ಅವರ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ವಿಕಾಸ್ ವಾಕರ್ ಅವರು ಮಹಾರಾಷ್ಟ್ರದ ಪಾಲ್ಘರ್‌ನ ವಸೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಗಳ ಸಾವಿನ ಬಳಿಕ ಅವರು ಖಿನ್ನತೆಗೆ ಒಳಗಾಗಿದ್ದರು.

ಶ್ರದ್ಧಾ ಪ್ರಕರಣದಲ್ಲಿ ಆಫ್ತಾಬ್ ಜೈಲಿನಲ್ಲಿರುವ ಕೊಲೆ ವಿಚಾರಣೆ ನಡೆಯುತ್ತಿರುವಾಗಲೇ ಈ ಘಟನೆ ನಡೆದಿದೆ. ವಿಕಾಸ್ ಅವರು ತನ್ನ ಮಗನೊಂದಿಗೆ ವಸೈನಲ್ಲಿ ವಾಸಿಸುತ್ತಿದ್ದರು. ಭಾನುವಾರ ಮುಂಜಾನೆ ಅವರ ಆರೋಗ್ಯ ಹದಗೆಟ್ಟಿದೆ. ಮಗ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಅಷ್ಟರಲ್ಲಾಗಲೇ ವಿಕಾಸ್‌ ಮೃತಪಟ್ಟಿದ್ದರು.

ಮಗಳಿಗೆ ನ್ಯಾಯಕ್ಕಾಗಿ 2 ವರ್ಷಗಳಿಗೂ ಹೆಚ್ಚು ಕಾಲ ಹೋರಾಡುತ್ತಿದ್ದರು. ಮೆಹ್ರೌಲಿ ಕಾಡಿನಲ್ಲಿ ಪತ್ತೆಯಾಗಿರುವ ಶ್ರದ್ಧಾ ಅವರ ಮೂಳೆಗಳ ಅವಶೇಷಗಳನ್ನು ದೆಹಲಿ ಪೊಲೀಸರು ಕುಟುಂಬಕ್ಕೆ ಹಸ್ತಾಂತರಿಸಲಿರುವ ಕಾರಣ ಅವರ ಅಂತ್ಯಕ್ರಿಯೆ ಇನ್ನೂ ನಡೆದಿಲ್ಲ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!