ಶ್ರದ್ಧಾ ಹತ್ಯೆ ಪ್ರಕರಣ: ಪೊಲೀಸರ ಮುಂದೆ ಮತ್ತಷ್ಟು ಸ್ಫೋಟಕ ಸಂಗತಿ ಬಾಯಿಬಿಟ್ಟ ಅಫ್ತಾಬ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದ ಶ್ರದ್ಧಾ ಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ಸ್ಪೋಟಕ ಮಾಹಿತಿ ಹೊರಬರುತ್ತಿದ್ದು, ಇದೀಗ ದೆಹಲಿ ಪೊಲೀಸರಲ್ಲಿ ಅಫ್ತಾಬ್ ಹೊಸ ವಿಚಾರಗಳನ್ನು ಹೇಳಿದ್ದಾನೆ.

ತನಿಖೆ ವೇಳೆ ಅಫ್ತಾಬ್, ತಾನು ಡ್ರಗ್ಸ್‌ಗೆ ಅಡಿಕ್ಟ್ ಆಗಿರುವುದಾಗಿ ಒಪ್ಪಿಕೊಂಡಿದ್ದಾನೆ. ನಿತ್ಯ ಗಾಂಜಾ ಸೇವಿಸುತ್ತಿದ್ದೆ, ಇದಕ್ಕೆ ಶ್ರದ್ಧಾ ವಿರೋಧಿಸಿದ್ದಳು, ಇದೇ ಕಾರಣಕ್ಕೆ ಶ್ರದ್ಧಾ ಜಗಳವಾಡುತ್ತಿದ್ದಳು ಎಂದು ತನಿಖೆ ವೇಳೆ ಹೇಳಿಕೊಂಡಿದ್ದಾನೆ.

ಮುಂಬೈನಿಂದ ದೆಹಲಿಗೆ ಶಿಫ್ಟ್ ಆಗಿದ್ದರಿಂದ ಶ್ರದ್ಧಾ ಮತ್ತು ನನ್ನ ನಡುವೆ ಲಗೇಜ್ ತರುವ ವಿಚಾರಕ್ಕೆ ಮೇ 18 ರಂದು ಜಗಳವಾಗಿತ್ತು. ಇಬ್ಬರು ನಗದು ಹಣದ ಕೊರತೆ ಎದುರಿಸುತ್ತಿದ್ದರಿಂದ ಮುಂಬೈನಿಂದ ಲಗೇಜ್ ತರುವುದು ಯಾರು ಎಂದು ಜಗಳಮಾಡಿಕೊಂಡಿದ್ದೆವು, ಕೊಲೆಯಾದ ದಿನ ತೀವ್ರ ಜಗಳ ನಡೆದಿತ್ತು.

ಈ ವೇಳೆ ತಾನು ಮನೆಯಿಂದ ಹೊರಗೆ ಹೋಗಿ ಗಾಂಜಾ ಸೇವಿಸಿ ಮನೆಗೆ ವಾಪಸ್ ಆಗಿದ್ದೆ, ಮತ್ತೆ ಜಗಳ ಮುಂದುವರಿದು ನಶೆಯಲ್ಲಿ ಕತ್ತು ಹಿಸುಕಿ ಹತ್ಯೆ ಮಾಡಿರುವುದಾಗಿ ಅಫ್ತಾಬ್ ಹೇಳಿದ್ದಾನೆ.

ಅಲ್ಲದೆ ಹಲವು ಬಾರಿ ಮನೆಯಲ್ಲಿ ಶ್ರದ್ಧಾ ಜೊತೆಯಲ್ಲಿ ತಾನು ಮದ್ಯ ಸೇವನೆ ಮಾಡಿ ಜಗಳ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.
ಇದೀಗ ಅಫ್ತಾಬ್ ವಿಚಾರಣೆ ವೇಳೆ ಪದೇ ಪದೇ ಹೇಳಿಕೆ ಬದಲಿಸುತ್ತಿರುವ ಹಿನ್ನೆಲೆ ಪೊಲೀಸರು ಸಾಕಷ್ಟು ಗೊಂದಲಕ್ಕೀಡಾಗಿದ್ದಾರೆ. ಈಗಾಗಲೇ ಮಂಪರು ಪರೀಕ್ಷೆ ನಡೆಸಲು ನ್ಯಾಯಲಯ ಅನುಮತಿ ನೀಡಿದ್ದು, ಅಫ್ತಾಬ್ ಕೂಡಾ ಒಪ್ಪಿಗೆ ಸೂಚಿಸಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!