ಶ್ರೀ ಕನಕ ದುರ್ಗಮ್ಮ ದೇವಿ ಸಿಡಿಬಂಡಿ ರಥೋತ್ಸವ ಸಂಭ್ರಮ

ಹೊಸದಿಗಂತ ವರದಿ, ಬಳ್ಳಾರಿ:

ನಗರದ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಿ ಸಿಡಿಬಂಡಿ ರಥೋತ್ಸವ ಮಂಗಳವಾರ ಸಂಜೆ ಲಕ್ಷಾಂತರ ಜನರ ಮಧ್ಯೆ ಅತ್ಯಂತ ವೈಭವದಿಂದ ನಡೆಯಿತು.

ನಗರ, ಸೇರಿದಂತೆ ರಾಜ್ಯದ ನಾನಾ ಜಿಲ್ಲೆ ಸೇರಿ ದೇಶ, ವಿದೇಶಗಳಿಂದ ಆಗಮಿಸಿದ ಭಕ್ತರು ಸಿಡಿಬಂಡಿ ಉತ್ಸವದಲ್ಲಿ ಭಾಗವಹಿಸಿ ಹೂವು, ಹಣ್ಣು, ಉತ್ತತ್ತಿಗಳನ್ನು ಸಿಡಿಬಂಡಿಗೆ ಎಸೆದು ಭಕ್ತಿ ಸಮರ್ಪಿಸಿದರು. ವಿಶೇಷವಾಗಿ ಗಾಣಿಗ ಸಮುದಾಯದವರು ಸುಮಾರು 40 ಅಡಿ ಉದ್ದದ ಮರದ ದಿಮ್ಮಿಯನ್ನು ಹಾಗು ಮೂರು ಎತ್ತುಗಳ ಬಂಡಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಶ್ರೀ ಕನಕ ದುರ್ಗಮ್ಮ ದೇವಿ ದೇಗುಲ ಮೂರು ಸುತ್ತು ಸಿಡಿಬಂಡಿ ಪ್ರದಕ್ಷಿಣೆ ಮಾಡಲಾಯಿತು. ಅತ್ಯಂತ ವೈಭವದಿಂದ ಅಲಂಕಾರ ಮಾಡಿದ್ದ ಸಿಡಿಬಂಡಿ ಮುಂದೆ ಸಾಗುತ್ತಿದ್ದಂತೆ ನೆರೆದ ಲಕ್ಷಾಂತರ ಭಕ್ತರಿಂದ ಜೈಕಾರ ಮೊಳಗಿದವು.

ಉತ್ಸವ, ದೇಗುಲದಲ್ಲಿ ವಿಶೇಷ ಪೂಜೆ
ಶ್ರೀ ಕನಕ ದುರ್ಗಮ್ಮ ಸಿಡಿಬಂಡಿ ಉತ್ಸವ ಹಿನ್ನೆಲೆ ಶ್ರೀ ಕನಕ ದುರ್ಗಮ್ಮ ದೇ ವಿಶೇಷ ಪೂಜೇ, ಅಭಿಷೇಕ, ಅಲಂಕಾರ, ಮಹಾ ನೈವೇದ್ಯ, ಮಂಗಳಾರತಿ ಸೇರಿ ವಿವಿಧ ಪೂಜೆಗಳು ನಡೆದವು. ಉತ್ಸವದ ನಿಮಿತ್ತ ದೇವಿಗೆ ಚಿನ್ನದ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ ಸಣ್ಣ ದುರ್ಗಮ್ಮ ದೇಗುಲದಿಂದ ಕನಕ ದುರ್ಗಮ್ಮ ದೆಗುಲದವರೆಗೆ ಮೇಟಿ ಕುಂಭ ಪೂಜೆ, ಗಾಣಿಗ ಸಮಾಜದಿಂದ ದೇವಿಗೆ ಮಹಾ ನೈವೇದ್ಯ ಮಾಡಲಾಯಿತು. ಉತ್ಸವ ಹಿನ್ನೆಲೆ ನಗರದ ಕನಕ ದುರ್ಗಮ್ಮ ದೇಗುಲ ವೃತ್ತದಿಂದ ಎಸ್ಪಿ ವೃತ್ತದವರೆಗೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು, ರಾತ್ರಿ ದೇಗುಲದ ಆವರಣದಲ್ಲಿ ವಿವಿಧ ಸಾoಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಹರಿದು ಬಂದ ಭಕ್ತ ಸಾಗರ
ಶ್ರೀ ಕನಕ ದುರ್ಗಮ್ಮ ದೇವಿ ಸಿಡಿಬಂಡಿ ರಥೋತ್ಸವ ಹಿನ್ನೆಲೆ ಭಕ್ತಸಾಗರವೇ ಹರಿದು ಬಂದಿತ್ತು. ನಗರ ಸೇರಿದಂತೆ ನೆರೆಯೆ ಆಂಧ್ರ, ಮಹಾರಾಷ್ಟ್ರ ಸೇರಿ ದೇಶ ವಿದೇಶಗಳಿಂದ ಆಗಮಿಸಿದ ಭಕ್ತರು ದೇವಿ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು. ದೇವಸ್ಥಾನ ಆಡಳಿತ ಮಂಡಳಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದೇವರ ದರ್ಶನ, ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!