ಹೊಸದಿಗಂತ ವರದಿ, ಬಳ್ಳಾರಿ:
ನಗರದ ಸತ್ಯನಾರಾಯಣ ಪೇಟೆ ಬಡಾವಣೆಯ ಕಡಗೋಲು ಶ್ರೀಕೃಷ್ಣ ಸಮೇತ ಪಂಚವೃಂದಾವನ ಸನ್ನಿಧಿ, ಶ್ರೀಮದುತ್ತರಾಧಿಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ನಿಮಿತ್ತ ಆ.30 ರಿಂದ ಸೆ.8ರ ರವರೆಗೆ ವಿವಿಧ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿ ಬುಧವಾರ ಸಂಜೆ ಶ್ರೀ ಕೃಷ್ಣನಿಗೆ ಶೇಷವಾಹನ ಸೇವೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಶ್ರೀ ಮಠದ ಪ್ರಧಾನ ಅರ್ಚಕರಾದ ಪಂ.ನವೀನ್ ಆಚಾರ್, ಪಂ.ಪ್ರವೀಣ್ ಆಚಾರ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ನಗರ ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ ನೂರಾರು ಭಕ್ತರು ಈ ಶೇಷವಾಹನ ಸೇವೆಯಲ್ಲಿ ಭಾಗವಹಿಸಿ ಭಕ್ತಿ ಸಮರ್ಪಿಸಿದರು.
ಶ್ರೀಮದುತ್ತರಾಧಿಮಠದಿಂದ ಪ್ರಾರಂಭವಾದ ಶೇಷ ವಾಹನ ಉತ್ಸವ, ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಸೇರಿದಂತೆ ವಿವಿಧ ರಸ್ತೆಗಳ ಮೂಲಕ ಶ್ರೀಮಠಕ್ಕೆ ತಲುಪಿತು. ಈ ವೇಳೆ ವಿವಿಧ ಭಜನಾ ಮಂಡಳಿ ಸದಸ್ಯರಿಂದ ಸಾಮೋಹಿಕ ಭಜನೆ, ಭಕ್ತರಿಂದ ಶ್ರೀಕೃಷ್ಣನ ನಾಮಸ್ಮರಣೆ ಮಾಡಲಾಯಿತು. ಮಹಿಳೆಯರು, ಮಕ್ಕಳು, ಅತ್ತ್ಯುತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಿ ಸಮರ್ಪಿಸಿದರು.