Saturday, March 25, 2023

Latest Posts

ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರ ರಥೋತ್ಸವ

ಹೊಸದಿಗಂತ ವರದಿ, ಗೋಕರ್ಣ:

ದಕ್ಷಿಣ ಕಾಶಿ ಎಂತಲೇ ಪ್ರಸಿದ್ದವಾಗಿರುವ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರ ರಥೋತ್ಸವವು ಗುರುವಾರ ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ಸಂಭ್ರಮದಿಂದ‌ ಜರುಗಿತು.
ಎಲ್ಲ ಧಾರ್ಮಿಕ ವಿಧಿವಿಧಾನದ ನಂತರ ಮಹಾಬಲೇಶ್ವರ ದೇವರ ದೊಡ್ಡ ತೇರನ್ನು ಭಕ್ತರು ಎಳೆದು ಕೃತಾರ್ಥರಾದರು. ಹರ ಹರ ಮಹಾದೇವ ಉದ್ಘೋಷ ಮುಗಿಲು ಮುಟ್ಟಿತ್ತು.ಕೊರೋನಾ ತಡೆಯ ನಂತರ ನಡೆದ ಈ ರಥೋತ್ಸವದಲ್ಲಿ ಭಕ್ತರು ತೇರು ಬೀದಿಯ ಇಕ್ಕೆಲಗಳಲ್ಲಿ  ಕಟ್ಟಡಗಳ ಮೇಲೆ ಕಿಕ್ಕಿರಿದು ನೆರೆದಿದ್ದರು.
ಜಿಲ್ಲಾಡಳಿತ ಮತ್ತು ದೇವಸ್ಥಾನ ಆಡಳಿತ ಕಮಿಟಿ ಸುಗಮ ಉತ್ಸವಕ್ಕೆ ಎಲ್ಲ ಏರ್ಪಾಟು ಮಾಡಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!